Recent Posts

Monday, January 20, 2025
ಸುದ್ದಿ

ಫಿಲೋಮಿನಾ ಎಮ್‍ಕಾಮ್ ವಿಭಾಗದಲ್ಲಿ ಸ್ಪರ್ಧೋತ್ಸವ – ಕಹಳೆ ನ್ಯೂಸ್

ಪುತ್ತೂರು: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಉದ್ದೇಶವಿಟ್ಟುಕೊಂಡು ಬಹು ವಿಧದ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತವೆ. ಅವಕಾಶಗಳನ್ನು ಪೂರ್ತಿಯಾಗಿ ಉಪಯೋಗಿಸಿಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಆದರ್ಶ ವಿದ್ಯಾರ್ಥಿಯ ಗುಣ ಲಕ್ಷಣ ಎಂದು ಸಂತ ಫಿಲೋಮಿನಾ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಯನ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಅಂತರ್ ತರಗತಿ ಸ್ಪರ್ಧೋತ್ಸವವಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಸ್ಪರ್ಧೆಗಳು ವಿದ್ಯಾರ್ಥಿಗಳ ಚಿಂತನಾ ಸಾಮಥ್ರ್ಯವನ್ನು ಹೆಚ್ಚಿಸಲು ಬಲು ಸಹಕಾರಿ. ಸ್ಪರ್ಧಾಳುಗಳು ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸದೆ, ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಬಾಗ ಸಂಯೋಜಕ ರಿತೇಶ್ ರೋಡ್ರಿಗಸ್ ಮಾತನಾಡಿ, ಪ್ರತಿಭೆ ಎಲ್ಲಾ ವಿದ್ಯಾರ್ಥಿಗಳಲ್ಲಿ ಅಡಗಿರುತ್ತದೆ. ಅವಕಾಶ ಒದಗಿ ಬಂದಾಗ ಅವುಗಳನ್ನು ವ್ಯಕ್ತಪಡಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಉತ್ಸವದಲ್ಲಿ ಕ್ವಿಜ್, ಕೇಸ್ ಸ್ಟಡಿ ಮತ್ತು ಮ್ಯಾಡ್ ಆ್ಯಡ್ ಎಂಬ ಸ್ಪರ್ಧೆಗಳಿದ್ದವು. ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಹತ್ತು ತಂಡಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಸುಶ್ಮಿತಾ ಮತ್ತು ತಂಡದವರು ಪ್ರಾರ್ಥಿಸಿದರು. ವಿಭಾಗದ ಸಂಯೋಜಕ ವಂ. ರಿತೇಶ್ ರೋಡ್ರಿಗಸ್ ಸ್ವಾಗತಿಸಿದರು. ಜೋಶೀಲ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ವಿತರಣೆ: ಸಾಯಂಕಾಲ ಜರಗಿದ ಸಮಾರೋಪ ಸಮಾರಂಭದಲ್ಲಿ ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಮತ್ತು ರಿತೇಶ್ ರೋಡ್ರಿಗಸ್ ವಿಜೇತರನ್ನು ಬಹುಮಾನ ನೀಡಿ ಅಭಿನಂದಿಸಿದರು. ಸಮಗ್ರ ಪ್ರಶಸ್ತಿಯನ್ನು ಕ್ರಸ್ಟ್ ತಂಡವು ಪಡೆದುಕೊಂಡಿತು.

ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಯಶವಂತ್ ಜಿ ನಾಯಕ್, ಪ್ರವೀಣ್, ನವ್ಯ ಭಟ್ ಮತ್ತು ಸುಪ್ರಿಯ ಪಿ ಜಿ ಉಪಸ್ಥಿತರಿದ್ದರು. ಡಯಾನಾ ವೇಗಸ್ ಸ್ವಾಗತಿಸಿದರು. ಕವನ ಬಹುಮಾನ ವಿಜೇತರ ವಿವರ ನೀಡಿದರು. ಶ್ರಾವ್ಯ ವಂದಿಸಿದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.