Recent Posts

Sunday, January 19, 2025
ಸುದ್ದಿ

ಪುತ್ತೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ದಿನದ ಆಚರಣೆ- ಕಹಳೆ ನ್ಯೂಸ್

ಪುತ್ತೂರು:
ಪುತ್ತೂರು ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ವಿಶ್ವಕರ್ಮ ಸಂಘ ಸಂಸ್ಥೆಗಳು ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ದಿನಾಚರಣೆ ಕಾರ್ಯಕ್ರಮವು ತಾಲೂಕು ಪಂಚಾಯತ್ ಸಭಾಂಗಣ ಪುತ್ತೂರು ಇಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಶಾಸಕರಾದ ಸಂಜೀವ ಮಟಂದೂರು ಇವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದೇಶಿಗರು ಭಾರತಕ್ಕೆ ಪ್ರವಾಸ ಬರುವುದೇ ವಿಶ್ವಕರ್ಮರ ಕೆತ್ತನೆಯ ಕೈಚಳಕ ನೋಡಲು, ಶಿಲ್ಪಕಲೆಯಲ್ಲಿ ಸಾಧನೆ ಮಾಡಿದವರಿಗೆ ಜಕಣಾಚಾರ್ಯ ಪ್ರಶಸ್ತಿ ದೊರೆಯಬೇಕು,ಬಾಕಿ ಧರ್ಮದವರು ವಿಶ್ವಕರ್ಮ ಪೂಜೆ ಆಚರಿಸಬೇಕು, ಈ ಜಗತ್ತೇ ವಿಶ್ವಕರ್ಮನ ಸೃಷ್ಟಿ; ಹಾಗಾಗಿ ನಾನು ಅವನ ಸೃಷ್ಟಿ ಎಂದು ಶಾಸಕರು ವಿಶ್ವಕರ್ಮನ ಬಗ್ಗೆ ತಿಳಿಸಿದರು.ಸಂಸ್ಮರಣಾ ಉಪನ್ಯಾಸವನ್ನು ಸರ್ಕಾರಿ ಪ್ರೌಢಶಾಲೆ ಮೂಡಬಿದ್ರೆ ಇದರ ಉಪನ್ಯಾಸಕರಾದ ಶ್ರೀ ಕುಂಜೂರು ಗಣೇಶ್ ಆಚಾರ್ಯ ಇವರು ನೀಡಿ ಕನ್ಯಾ ಸಂಕ್ರಮಣದ ದಿವಸ ಈ ವಿಶ್ವಕರ್ಮ ಪೂಜೆಯನ್ನು ಆಚರಿಸಲಾಗುವುದು, ಯಜ್ಞವನ್ನು ಹಾಗೂ ಶಿಲ್ಪ ಶಿಲ್ಪಕಲೆಗಳನ್ನು ವಿಶ್ವಕ್ಕೆ ಮೊದಲು ಕೊಟ್ಟವನು ವಿಶ್ವಕರ್ಮ, ರಾಷ್ಟ್ರಪತಿ ಯವರು ದೇಶವನ್ನು ನಿರ್ವಹಿಸುವಂತೆ ವಿಶ್ವಕರ್ಮನು ಭೂಮಿಯ ಒಳಗೆ ಬಾರದೆ ಹೊರಗಿನಿಂದಲೇ ವಿಶ್ವದ ಸಕಲ ವ್ಯವಸ್ಥೆಯನ್ನು ನಿರೂಪಿಸುವನು ಎಂದು ವಿಶ್ವಕರ್ಮನ ಮಹಿಮೆಯ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಷ್ಣು ಪ್ರಸಾದ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯಾದ ನವೀನ್ ಭಂಡಾರಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಯ ಹರೀಶ್, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಲಲಿತಾ, ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ಆಚಾರ್ಯ ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು