Sunday, November 24, 2024
ಸುದ್ದಿ

2022ಕ್ಕೆ ಗಿಗಾವಾಟ್ ಶುದ್ಧ ಇಂಧನಕ್ಕೆ ಆಧ್ಯತೆ,ಕೇಂದ್ರ ಸಚಿವ ಹರ್ಷವರ್ಧನ್ ಹೇಳಿಕೆ -ಕಹಳೆ ನ್ಯೂಸ್

2022ರ ಹೊತ್ತಿಗೆ ಭಾರತ 175 ಗಿಗಾವಾಟ್ ಶುದ್ಧ ಇಂಧನವನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಹರ್ಷವರ್ಧನ್ ಹೇಳಿದ್ದಾರೆ. 2022ರ ವೇಳೆಗೆ ನಮ್ಮ ದೇಶದಲ್ಲಿ ಕನಿಷ್ಠ 175 ಗಿಗಾವಾಟ್ ನಷ್ಟು ಶುದ್ಧ ಇಂಧನ ಉತ್ಪಾದಿಸುವ ಗುರಿ ಇಟ್ಟು ಕೂಳ್ಳಲಾಗಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿ ರಾಷ್ಟ್ರೀಯ ಅಂತರ್‍ಶಿಕ್ಷಣ ಇಂಧನ ಸಂಶೋಧನೆ ಕೇಂದ್ರ ಮತ್ತು ಬೆಂಗಳೂರಿನ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ, ರಾಷ್ಟ್ರೀಯ ಶುದ್ಧ ಕಲ್ಲಿದ್ದಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ವನ್ನು ಉದ್ಘಾಟಿಸಿ ಮಾತನಾಡಿದರು. ಇಂಧನ ತಯಾರಿಕೆಯಲ್ಲಿ ನಾವು ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ. ಹಸಿರುಮನೆ ಪರಿಣಾಮ, ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಸಮಸ್ಯೆಯಿಂದ ನಾವು ಹೊರಬರಬೇಕಾಗಿದೆ. ಇದುವರೆಗೆ ದೇಶದಲ್ಲಿ ಈ ಸಮಸ್ಯೆಗಳನ್ನು ಶೇಕಡಾ 21ರಷ್ಟು ತಗ್ಗಿಸಲು ಸಾಧ್ಯವಾಗಿದ್ದು ಅದು ಮುಂದಿನ ದಿನಗಳಲ್ಲಿ ಶೇಕಡಾ 33ರಿಂದ ಶೇಕಡಾ 35ರಷ್ಟಾಗಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು