Monday, November 25, 2024
ಸುದ್ದಿ

ಇಂದು ಎಲ್ಲಡೆ ವಿಶ್ವ ಕರ್ಮ ಪೂಜಾ ಮಹೊತ್ಸವ- ಕಹಳೆ ನ್ಯೂಸ್

ಇಂದು ವಿಶ್ವಕರ್ಮರ ದಿನ.ಪುರಾಣಗಳಲ್ಲಿ ಬರುವ, ಒಕ್ಕಣೆಯ ಪ್ರಕಾರ ದೇವತೆಗಳ ಶಿಲ್ಪಿಯೇ ವಿಶ್ವಕರ್ಮರು. ಇಡಿ ಸೃಷ್ಟಿಯ ಎಲ್ಲಾ ವಸ್ತುಗಳು ಅವರಿಂದಲೇ ನಿರ್ಮಿತವಾಗಿವೆ. ವಿಶ್ವನಿರ್ಮಾಣದ ಕಾರ್ಯದಲ್ಲಿ ಪ್ರಜಾಪತಿಗೆ ಜೊತೆಯಾದವರು ಇವರು. ಸೃಷ್ಟಿಯೇ ಒಂದು ಶಿಲ್ಪಕಾರ್ಯ. ಹೀಗಾಗಿ ವಿಶ್ವಕರ್ಮರನ್ನು ಮಹಾಶಿಲ್ಪಿಯಾಗಿ ಕಾಣಿಸಲಾಗಿದೆ. ದೇವತೆಗಳಿಗೆ ಬೇಕಾದ ಎಲ್ಲ ಬಗೆಯ ಆಯುಧ, ವಾಹನಗಳನ್ನೂ ಮಾಡಿಕೊಟ್ಟ ಮಹಾನ್ ಮೇಧಾವಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೂರ್ಯಮಂಡಲವನ್ನೇ ಬಳಸಿಕೊಂಡು ಮಹಾವಿಷ್ಣುವಿಗೆ ಸುದರ್ಶನಚಕ್ರವನ್ನು ನಿರ್ಮಿಸಿಕೊಟ್ಟು, ರಾಕ್ಷಸಸಂಹಾರಕ್ಕೆ ಸಹಕರಿಸಿದವರೂ ಇವರೇ. ಹೀಗೆಯೇ ಸವೇರ್ಂದ್ರಿಯಗಳು, ಆಕಾಶಾದಿ ಪಂಚ ಮಹಾಭೂತಗಳು, ಶಿವ ಬ್ರಹ್ಮ ಹರಿ ಇಂದ್ರ ಸೂರ್ಯಾದಿ ಸಮಸ್ತ ದೇವತೆಗಳು ದ್ವಾದಶಾದಿತ್ಯ ಏಕಾದಶ ರುದ್ರರು ಸರ್ವ ಋಷಿಗಳು ಮನುಷ್ಯಾದಿ ಸಕಲ ಪ್ರಾಣಿಗಳು ವಿಶ್ವಕರ್ಮರಿಂದಲೆ ಉತ್ಪತ್ತಿಯಾಗಿ ಅವರಿಂದ ಪ್ರವರ್ಧಮಾನಗೊಂಡು ಕೊನೆಗೆ ಅವರಲ್ಲಿಯೆ ಲೀನವಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರಕೃತಿ ಧರ್ಮ ವಿಶ್ವಕರ್ಮರ ತತ್ವ ಸಿದ್ಧಾಂತ ನಾವೆಲ್ಲರು ಅವರನ್ನು ಭಕ್ತಿಭಾವದಿಂದ ಉಪಾಸನೆ ಮಾಡಿ ಈ ದಿನದಂದು ಅಮೃತತ್ವವನ್ನ ಪಡೆಯುವಂತರಾಗೋಣ.

ಜಾಹೀರಾತು
ಜಾಹೀರಾತು
ಜಾಹೀರಾತು