ಬೆಂಗಳೂರು : ನಗರದಲ್ಲಿನ ಬನಶಂಕರಿಯ 3ನೇ ಹಂತದಲ್ಲಿರುವ ಆಂಜೆನೇಯ ನಗರದಲ್ಲಿ ವಿಜೃಂಭಣೆಯಿಂದ ಪರಿಸರ ಸ್ನೇಹಿ ಗಣಪನ ಮಹಾ ರಥೋತ್ಸವ ” ಜರುಗಿತು .
ನಗರದ ಬನಶಂಕರಿ 3 ನೆ ಹಂತದಲ್ಲಿರುವ ಜನತಾ ಬಜಾರ್ ನಲ್ಲಿರುವ ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನೆಲಿಸಿರುವ ಶ್ರೀ ಶ್ರೀನಿವಾಸನ ಸನ್ನಿಧಿಯಲ್ಲಿ ಆಂಜೆನೇಯ ಕ್ಷೇಮಾಭಿವೃದ್ಧಿ ಸಂಘದಿಂದ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಿ ಸೆಪ್ಟೆಂಬರ್ 6 ರಿಂದ 8 ರವರೆಗೆ ಪೂಜೆ ಸಲ್ಲಿಸಲಾಯಿತು .
ಆಂಜೆನೇಯ ಕ್ಷೇಮಾಭಿವೃದ್ಧಿ ಸಂಘ 2012ರಲ್ಲಿ ಆರಂಭವಾಗಿದ್ದು 2012 – 13 ರಲ್ಲಿ ಬಣ್ಣದ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗಿತ್ತು. ಅದರೆ 2014 ರಿಂದ ಸತತ 5 ವರ್ಷಗಳಿಂದ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಾ ಪರಸರ ಉಳಿಸುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದ್ದು ಗಣೇಶನ ಆರಾಧನೆ ಮಾಡುವ ನಾಡಿನ ಸಾಂಸ್ಕೃತಿಕ ಜನತೆಯಲ್ಲಿ, ಪರಿಸರ ಸ್ನೇಹಿ ಗಣಪನ ಗಣಪನನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡಿ ಹಾಗು ಗಣೇಶನ ವಿಸರ್ಜನೆ ಮಾಡುವಾಗ ಪಟಾಕಿ ಸಿಡಸದೆ ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರು ಕೈ ಜೋಡಿಸಿ ಹಾಗು ಪುಟ್ಟ ಪುಟ್ಟ ಗಾತ್ರದ ಗಣೇಶನನ್ನು ಪ್ರತಿಷ್ಠಾಪಿಸಿ ನಿಮ್ಮ ಬಳಿ ಇರುವ ದೊಡ್ಡ ಪಾತ್ರೆಯಲ್ಲಿ ಗಣೇಶನ ವಿಸರ್ಜನೆ ಮಾಡಿ ಪರಿಸರ ಉಳಿಸಿ ಎಂದು ಅಂಜೆನೇಯ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಗುಂಡುರಾವ್ ಹೇಳಿದರು.
ಆಂಜೆನೇಯ ಕ್ಷೇಮಾಭಿವೃದ್ಧಿ ಸಂಘದಿಂದ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಿ ಸೆಪ್ಟೆಂಬರ್ 6 ರಿಂದ 8 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು .
ನಗರದಲ್ಲಿನ ಬನಶಂಕರಿಯ 3ನೇ ಹಂತದಲ್ಲಿರುವ ಆಂಜೆನೇಯ ನಗರದಲ್ಲಿ ವಿಜೃಂಭಣೆಯಿಂದ ಪರಿಸರ ಸ್ನೇಹಿ ಗಣಪನ ಮಹಾ ರಥೋತ್ಸವ ನಗರದ ಬನಶಂಕರಿ 3 ನೆ ಹಂತ ದಲ್ಲಿರುವ ಜನತಾ ಬಜಾರ್ ನಲ್ಲಿರುವ ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಆರಂಭ ಮಾಡಿ – ಆಂಜೆನೇಯ ನಗರದ ಪ್ರಮುಖ ರಸ್ತೆಗಳಲ್ಲಿ ಸೆಪ್ಟೆಂಬರ್ 8 ರಂದು ಜರುಗಿತು .
ನಗರದ ಬನಶಂಕರಿ 3 ನೆ ಹಂತ ದಲ್ಲಿರುವ ಜನತಾ ಬಜಾರ್ ನಲ್ಲಿರುವ ಶ್ರೀ ಲಕ್ಷ್ಮೀ ವರಾಹ ವೆಂಕಟೇಶ್ವರ ಸ್ವಾಮಿ ಸನ್ನಿಧಿ ಯಲ್ಲಿ ದೊಡ್ಡ ಪಾತ್ರೆಯಲ್ಲಿ ಗಣೇಶನ ವಿಸರ್ಜನೆ ಮಾಡಲಾಯಿತು .
ಚಿತ್ರ : ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ