ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದ ಕಾರ್ಯಾಚರಣೆ ಮತ್ತು ನಿರ್ವಹಣೆ ಹೊರಗುತ್ತಿಗೆ ಬೆನ್ನಲ್ಲೇ, ಬಿಎಂಆರ್ ಸಿಎಲ್‍ನ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಡೋಲಾಯಮಾನವಾಗಿದ್ದು, ನೂರಾರು ಅಭ್ಯರ್ಥಿಗಳ ಭವಿಷ್ಯದ ಮೇಲೆ ಈಗ ತೂಗುಗತ್ತಿ ನೇತಾಡುತ್ತಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ಕೆಲವೇ ತಿಂಗಳುಗಳ ಹಿಂದೆ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ 174 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಮಧ್ಯೆ ಅದೇ ವಿಭಾಗವನ್ನು ಹೊರಗುತ್ತಿಗೆ ನೀಡಲು ಮೆಟ್ರೋ ಮಂಡಳಿಯ ಸಭೆಯಲ್ಲಿ ಸದ್ದಿಲ್ಲದೆ ತೀರ್ಮಾನ ಕೈಗೂಂಡಿದೆ.
ನಿಗಮದ ಮೂಲಗಳ ಪ್ರಕಾರ ಕೇವಲ 50ರಿಂದ 55 ಹುದ್ದೆಗಳಿಗೆ ನೇಮಕ ಮಾಡಿ, ಉಳಿದ ಹುದ್ದೆಗಳನ್ನು ರದ್ದುಗೂಳಿಸುವ ಚಿಂತನೆ ನಡೆದಿದೆ. ಹಾಗೂಂದು ವೇಳೆ ನೇಮಕಾತಿ ಪ್ರಕ್ರಿಯೆ ರದ್ದುಗೂಳಿಸಿದರೆ, ಈ ಹಿಂದಿದ್ದ ಕೆಲಸವನ್ನು ಬಿಟ್ಟು, ಹಗಲು-ರಾತ್ರಿ ಓದಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಶ್ರಮ ನಿರರ್ಥಕವಾಗಲಿದೆ.