ಬೆಂಗಳೂರು: ಮೆರವಣಿಗೆ ಹಾಗೂ ಪ್ರತಿಭಟನೆಗಳಿಂದಾಗಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ, ನೌಕರಸ್ಥರಿಗೆ, ವ್ಯಾಪಾರಿ ವರ್ಗಕ್ಕೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಹಾಗೂ ಮೆರವಣಿಗೆಗಳ ಮೊದಲು ಕಡ್ಡಾಯವಾಗಿ ಅನುಮತಿ ಪಡೆಯುವಂತೆ, ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಸಭೆ ಹಾಗೂ ಮೆರವಣಿಗೆ ಅನುಮತಿ ಹಾಗೂ ನಿಯಂತ್ರಣ( ಬೆಂಗಳೂರು ನಗರ) ಆದೇಶ 2009 ಎಂಬ ಆದೇಶದಡಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರದಲ್ಲಿ ರಾಜಕೀಯ, ಧಾರ್ಮಿಕ ಸಂಘಟನೆ ಸೇರಿ ಇತರ ವ್ಯಕ್ತಿಗಳು ಪ್ರತಿಭಟನೆ, ಮೆರವಣಿಗೆ ಏರ್ಪಡಿಸುವ ಮುನ್ನ ಕರ್ನಾಟಕ ಪೊಲೀಸ್ ಕಾಯ್ದೆ 31 ಅಡಿಯಲ್ಲಿ ಸಭೆ ಹಾಗೂ ಮೆರವಣಿಗೆಗಳಿಗೆ ಅನುಮತಿ ಹಾಗೂ ನಿಯಂತ್ರಣ (ಬೆಂಗಳೂರು ನಗರ) ಆದೇಶ -2009 ಎಂಬ ಆದೇಶದ ಪ್ರಕಾರ ಸಭೆ ಹಾಗೂ ಮೆರವಣಿಗೆ ಆಯೋಜಿಸುವ ಸಂಘಟನಕಾರರು , ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ 11 ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.