Recent Posts

Monday, January 20, 2025
ಸುದ್ದಿ

ಮುಂದಿನ ಸಂಪುಟ ವಿಸ್ತರಣೆ ಸಂದರ್ಭ ಸುಳ್ಯ ಶಾಸಕ ಅಂಗಾರ ಪರಿಗಣನೆಗೆ – ಕಹಳೆ ನ್ಯೂಸ್

ಸುಳ್ಯ: ಮುಂದಿನ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಸುಳ್ಯ ಶಾಸಕ ಅಂಗಾರ ಅವರನ್ನು ಮಂತ್ರಿ ಪದವಿಗೆ ಪರಿಗಣಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪರವನ್ನು ಭೇಟಿ ಮಾಡಿದ ಸುಳ್ಯದ ಬಿಜೆಪಿ ಮುಖಂಡರಿಗೆ ಭರವಸೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ನೇತೃತ್ವದಲ್ಲಿ ಸುಳ್ಯ ಬಿಜೆಪಿ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿತು. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಲಿಖಿತ ಮನವಿ ಸಲ್ಲಿಸಿದ್ದರು. ಹೀಗಾಗಿ ಪ್ರತಿಕ್ರಿಯಿಸಿದ ಸಿಎಂ, ಆರು ತಿಂಗಳೂಳಗೆ ಸಂಪುಟ ವಿಸ್ತರಣೆ ಮಾಡಲಿದ್ದು, ಅಂಗಾರರನ್ನು ಪರಿಗಣಿಸುವ ಭರವಸೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಸುಳ್ಯ ಬಿಜೆಪಿಯ ವೆಂಕಟ ವಳಲಂಬೆ, ಎ.ವಿ. ತೀರ್ಥರಾಮ, ವೆಂಕಟ್ ದಂಬೆಕೋಡಿ, ಸುಬೋಧ್ ಶೆಟ್ಟಿ ಮೇನಾಲ, ಎನ್.ಎ. ರಾಮಚಂದ್ರ, ಮುಳಿಯ ಕೇಶವ ಭಟ್, ಸುಧಾಕರ ಕಾಮತ್, ರಾಕೇಶ್ ರೈ ಕೆಡೆಂಜಿ, ಮನ್ಮಥ, ವಿನಯ ಕುಮಾರ್, ದಿನೇಶ್ ಮೆದು ನಿಯೋಗದಲ್ಲಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು