ಮೊಹಾಲಿ: ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ದ್ವಿತೀಯ ಮುಖಾಮುಖೀ ಮೊಹಾಲಿಯಲ್ಲಿ ಇಂದು ನಡೆಯಲಿದೆ. ಧರ್ಮಶಾಲಾದಲ್ಲಿ ನಡೆಯಬೇಕಾಗಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೂಂಡ ಕಾರಣ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿತ್ತು. ಆದರೆ ಮೊಹಾಲಿಯಲ್ಲಿ ಮಳೆಯ ಕಾಟ ಇಲ್ಲ. ಹಾಗಾಗಿ ಅಭಿಮಾನಿಗಳು ರೋಚಕ ಹೋರಾಟವನ್ನು ಎದುರು ಕಾಣಬಹುದು.
ಭಾರತವೇ ಫೇವರಿಟ್ ಈವರೆಗೆ ತವರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೂರು ಟಿ20 ಪಂದ್ಯಗಳಲ್ಲಿ ಭಾರತ ಒಂದರಲ್ಲೂ ಗೆದ್ದಿಲ್ಲ. ಆದರೆ ಮೊಹಾಲಿ ಅಂಗಳದಲ್ಲಿ ಭಾರತವೇ ಫೇವರಿಟ್ ಆಗಿದೆ. ಇಲ್ಲಿ ಆಡಿದ ಹಲವು ಪಂದ್ಯಗಳಲ್ಲಿ ಭಾರತ ಜಯ ಗಳಿಸಿದೆ.
ಪಂತ್‍ಗೆ ಅವಕಾಶ, ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಸ್ಟಾರ್ ಆಟಗಾರರು. ರಿಷಭ್ ಪಂತ್‍ಗೆ ಉತ್ತಮ ನಿರ್ವಹಣೆ ನೀಡಲು ಇದೂಂದು ಉತ್ತಮ ಅವಕಾಶವಾಗಿದೆ. ಮುಂಬರುವ ಟಿ20 ವಿಶ್ವಕಪ್‍ಗೆ ಆಯ್ಕೆಯಾಗಬೇಕಾದರೆ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಬೇಕು. ಇಲ್ಲವಾದಲ್ಲಿ ಪಂತ್ ಸ್ಥಾನಕ್ಕೆ ಬೇರೊಬ್ಬ ಆಟಗಾರ ಆಯ್ಕೆಯಾಗುವ ಸಾಧ್ಯತೆಯಿದೆ. ಶ್ರೇಯಸ್ ಅಯ್ಯರ್, ನವದೀಪ್ ಸೈನಿ, ರಾಹುಲ್ ಚಹರ್ ಅವರಿಗೂ ತಮ್ಮ ಪ್ರತಿಭೆಯನ್ನು ಹೊರಹಾಕಲು ಇದೂಂದು ಉತ್ತಮ ವೇದಿಕೆಯಾಗಿದೆ.