Recent Posts

Sunday, January 19, 2025
ಸುದ್ದಿ

ಪುತ್ತೂರು: ಇನ್ನರ್ ವೀಲ್ ಕ್ಲಬ್ ಪುತ್ತೂರು ಹಾಗೂ ಮುಳಿಯ ಫೌಂಡೇಶನ್ ವತಿಯಿಂದ ಸೀಡ್ ಬಾಲ್ ಅಭಿಯಾನ- ಕಹಳೆ ನ್ಯೂಸ್

ಪುತ್ತೂರು:

ಕುರಿಯ ಸ.ಉ.ಹಿ.ಪ್ರಾ ಶಾಲೆಯಲ್ಲಿ ಇನ್ನರ್ ವೀಲ್ ಕ್ಲಬ್ ಪುತ್ತೂರು ಮತ್ತು ಮುಳಿಯ ಫೌಂಡೇಶನ್ ಸಹಯೋಗದೊಂದಿಗೆ ಸೆಪ್ಟೆಂಬರ್17ರಂದು ಬೀಜದುಂಡೆ ಬಿತ್ತುವ ಕಾರ್ಯಕ್ರಮ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಸಹನಾ ಭವಿನ್ ಸ್ವಾಗತಿಸಿ ಸದಸ್ಯೆ ಲಲಿತಾ ಭಟ್ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾತನಾಡಿ, ಮುಳಿಯ ಫೌಂಡೇಶನ್ ನ ಯತೀಶ್ ಪ್ರಾಸ್ತಾವಿಕ ಮಾತನಾಡಿ ಶಂಕರಿ.ಎಂ.ಎಸ್ ಭಟ್ ಧನ್ಯವಾದ ಸಮರ್ಪಿಸಿದರು.
ಪ್ರಭಾರ ಮುಖ್ಯ ಶಿಕ್ಷಕಿ ಪ್ರೇಮ, ಇನ್ನರ್ ವೀಲ್ ಕಾರ್ಯದರ್ಶಿ ವಿಜಯಲಕ್ಷ್ಮೀ ಶೆಣೈ, ಸದಸ್ಯೆಯರಾದ ಆಶಾ ನಾಯಕ್, ಸಂಧ್ಯಾ ನಾರಿಯೂರು, ಮುಳಿಯ ಫೌಂಡೇಶನ್ ನ ಪ್ರಶಾಂತ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು