ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯದಿಂದ ವಂಚಿತರಾದ ತೀರ ಬಡವರ್ಗದ ಜನರು ಅಡುಗೆ ಗ್ಯಾಸ್‍ನಂತಹ ಸಾಧನಗಳ ಉಪಯೋಗ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಎಲ್‍ಪಿಜಿ ಪಂಚಾಯಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ಭಟ್ಕಳ ಪಟ್ಟಣದ ಅರ್ಬನ್ ಬ್ಯಾಂಕ ಹಾಲಿನಲ್ಲಿ ಇಂಡಿಯನ್ ಆಯಿಲ್ ಕಾರ್ಪರೇಶನ್, ರಂಜನ್ ಇಂಡೇನ್ ಎಜೆನ್ಸಿ, ರಫಾತ್ ಎಜೆನ್ಸಿ, ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರಧಾನಮಂತ್ರಿ ಎಲ್‍ಪಿಜಿ ಪಂಚಾಯಿತಿ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಒಲೆ ಮತ್ತು ಸಿಲೆಂಡರ್ ವಿತರಣೆ ಮಾಡಲಾಯಿತು.
ಭಟ್ಕಳ ಪಟ್ಟಣದ ಅರ್ಬನ್ ಬ್ಯಾಂಕ್ ಹಾಲಿನಲ್ಲಿ ಇಂಡಿಯನ್ ಆಯಿಲ್ ಕಾರ್ಪರೇಶನ್, ರಂಜನ್ ಇಂಡೇನ್ ಎಜೆನ್ಸಿ, ರಫಾತ್ ಎಜೆನ್ಸಿ, ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರಧಾನಮಂತ್ರಿ ಎಲ್‍ಪಿಜಿ ಪಂಚಾಯಿತಿ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ, ಎಎಸ್‍ಪಿ ನಿಖಿಲ್ ಬುಳ್ಳಾವರ, ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ, ಸಿಡಿಪಿಒ ಸುಶೀಲಾ ಮೊಗೇರ, ವಿ ರಮೇಶ ಬಾಬು, ಹುಬ್ಬಳ್ಳಿ ಎಲ್‍ಪಿಜಿ ಸೇಲ್ಸ್‍ನ ಪಿ.ವಿ.ಆರ್ ಭಾರ್ಗವ ಇತರರು ಉಪಸ್ಥಿತರಿದ್ದರು.