ಪುತ್ತೂರು : ಮುಖ್ಯಮಂತ್ರಿಗಳ ಭೇಟಿ ನಂತರ ಪುತ್ತೂರಿನ ಚುನಾವಣಾ ಕಣ ಗರಿಗೆದರಿದೆ. ಹಾಲಿ ಶಾಸಕಿ ಶುಕುಂತಲಾ ಶೆಟ್ಟಿಯವರನ್ನು ಬದಲಾಯಿಸುವ ಚಿಂತನೆ ಕಾಂಗ್ರೆಸ್ ನ ಒಳಗೆ ನಡೆದಿದೆ ಎನ್ನಲಾಗುತ್ತಿದೆ. ಗೌಡ ಸಮುದಾಯದ ಪ್ರಬಲ ನಾಯಕಿ ದಿವ್ಯಪ್ರಭಾ ಗೌಡರವರು ಈ ಭಾರಿಯ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬುದೇ ಪ್ರಸ್ತುತ ಚರ್ಚೆಯ ವಿಷಯ.
ಹೌದು, ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷರಾದ ಹಾಗೂ ಗೌಡ ಸಮಾಜದ ಪ್ರಬಲ ಮತ್ತು ಜನಸ್ನೇಹಿ ನಾಯಕಿ ಎಂಬ ಹೆಗ್ಗೆಳಿಗೆ ಪತ್ರರಾದ ಶ್ರೀಮತಿ ದಿವ್ಯಪ್ರಭಾರ ಹೆಸರು ಪ್ರಸುತ್ತ ಪುತ್ತೂರಿನ ಕಾಂಗ್ರೆಸ್ ಪಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈವರ ಚಿಂತನೆಯಲ್ಲಿದೆ ಎನ್ನಲಾಗುತ್ತಿದೆ.
ದಿವ್ಯಪ್ರಭಾ ಸ್ಪರ್ಧಿಸಿದರೆ ಗೆಲುವು ಸಾಧ್ಯವೇ ?
ಹೀಗೊಂದು ಲೆಕ್ಕಾಚಾರ ಹಾಕಿ ನೋಡಿದರೆ ಪುತ್ತೂರು ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಗೌಡ ಸಮಾಜದ ಮತಗಳು ನಿರ್ಣಾಯಕ ಮತಗಳೂ ಹೌದು, ಪತ್ರಿಪಕ್ಷ ಬಿ.ಜೆ.ಪಿ.ಯಿಂದ ಗೌಡ ಸಮುದಾಯಕ್ಕೆ ಟಿಕೆಟ್ ಇಲ್ಲ ಎಂಬುದು ಬಹುತೇಕ ಖಚಿತವಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಈ ನಡೆಗೆ ಮುಂದಾಗಿದೆ ಎನ್ನಲಾಗುತ್ತಿದೆ. ಓಟ್ಟಾರೆ ಈ ಭಾರಿ ಕಾಂಗ್ರೆಸ್ ನಿಂದ ಬುಹುತೇಕ ದಿವ್ಯಪ್ರಭಾ ಸ್ಪರ್ಧೆ ಖಚಿತವಾಗಿದೆ.
ಶುಕುಂತಲಾ ಶೆಟ್ಟಿ ಮತ್ತು ದಿವ್ಯಪ್ರಭಾ ಗೌಡ
ಇಬ್ಬರೂ ಕಾಂಗ್ರೆಸ್ಸಿನ ಪ್ರಬಲ ನಾಯಕರು. ಒಬ್ಬರು ಹಾಲಿ ಶಾಸಕಿ ಮತ್ತು ಬಂಟ ಸಮುದಾಯದ ಪ್ರಬಲನಾಯಕಿ. ಆದರೆ, ವಲಸಿಗರೂ ಎಂಬ ಹಣೆಪಟ್ಟಿ, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕ ಜೊತೆಗಿನ ಅಸಮಾಧಾನ, ಕಳಕ್ಕೊಳ್ಳುತ್ತಿರುವ ಜನಪ್ರಿಯತೆ ನೋಡಿದರೆ, ದಿವ್ಯಪ್ರಭಾರರ ಕಡೆಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಪುತ್ತೂರಿನ ಅತೀದೊಡ್ಡ ಸಮುದಾಯದ ಪ್ರತಿನಿಧಿ ಮತ್ತು ಆ ಸಮುದಾಯದ ಬೆಂಬಲ ಜೊತೆಜೊತೆಗೆ ಹಿರಿಯ ನಾಯಕರೊಂದಿಗಿನ ಉತ್ತಮ ಸಂಪರ್ಕ ದಿವ್ಯಪ್ರಭಾ ಚಿಲ್ತಡ್ಕರಿಗೆವರದಾನವಾಗಲಿದೆ.
ವರದಿ : ಕಹಳೆ ನ್ಯೂಸ್