Monday, November 25, 2024
ಸುದ್ದಿ

ಬ್ರಹ್ಮಶ್ರೀ ನಾರಾಯಣ ಗುರುಗಳು ಜಗತ್ತಿಗೆ ಐಕ್ಯತೆ ಸಾರಿದ ಶ್ರೇಷ್ಠ ಸಂತ – ಶಾಸಕ ಕಾಮತ್ – ಕಹಳೆ ನ್ಯೂಸ್

ಮಂಗಳೂರು : ಬಿಲ್ಲವ ಸಂಘ ಉರ್ವ ಅಶೋಕನಗರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜನ್ಮ ದಿನಾಚರಣೆಯು ಗುರುವರ್ಯರ ಶೋಭಾಯಾತ್ರೆಯೊಂದಿಗೆ ಜರಗಿತು. ಸಭಾ ಕಾರ್ಯಕ್ರಮಕ್ಕೆ ನಿವೃತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಮಾದೇವಿಯವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಕಾಮತ್ ಅವರು ಮಾತನಾಡಿ, ಒಂದೇ ಜಾತಿ,ಒಂದೇ ಮತ, ಒಬ್ಬನೇ ದೇವರು ಎನ್ನುವ ಮಂತ್ರದೊಂದಿಗೆ ಜಗತ್ತಿಗೆ ಬೆಳಕು ತುಂಬಿದವರು ನಾರಾಯಣ ಗುರುಗಳು. ಮೇಲು ಕೀಳೆಂಬ ಭೇದವನ್ನು ತೊಡೆದು ಐಕ್ಯತೆಯ ಸಾರವನ್ನು ಜಗತ್ತಿಗೆ ಪಸರಿಸಿದ ಒಬ್ಬ ಶ್ರೇಷ್ಠ ಸಂತ ಎಂದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಜಯಂತ ನಡುಬೈಲು ಮಾತನಾಡಿ ಹಿಂದುಳಿದ ನಾರಾಯಣ ಗುರುಗಳು ವರ್ಗಗಳ ಜನತೆಯ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನ ಎಂದರು. ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿದ್ಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ ಮತ್ತು ಎಚ್ ಎಸ್ ರಾಘವೇಂದ್ರ ಅವರು ಹಲವಾರು ವರ್ಷಗಳಿಂದ ಮಾಡುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿ.ಎಸ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ದ್ಯುತಿ ದಿವಾಕರ್ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕ ಪಡೆದ ಕುಮಾರಿ ಮೈತ್ರಿ ಸುದೀನ್, ಮೇಘಶ್ರೀ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಧ್ಯಾರ್ಥಿ ವೇತನ ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಘದ ಗೌರವಾದ್ಯಕ್ಷರಾದ ಬಿಜಿ ಸುವರ್ಣ ಸ್ವಾಗತಿಸಿದರು. ಹಾಗೂ ಸತೀಶ್ ಪೂಜಾರಿ ಅಶೋಕನಗರ ಪ್ರಾಸ್ತಾವನೆಗೈದು ಶ್ರೀಗೋಪಾಲ್ ಕೋಟ್ಯಾನ್ ಪ್ರಾರ್ಥನೆ ಮಾಡಿದರು. ಸಂಘದ ಅಧ್ಯಕ್ಷ ಬಿ.ಪಿ ದಿವಾಕರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಧನ್ಯಲತಾ ರಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಆರ್ ಪ್ರವೀಣ್ ಕುಮಾರ್ ಧನ್ಯವಾದ ಸಮರ್ಪಿಸಿದರು.

ಮುಖ್ಯ ಅತಿಥಿಗಳಾಗಿ ಕೆ.ಚರಣ್, ಎಂ ಎಸ್ ಕೋಟ್ಯಾನ್, ಬಿಪಿ ಹರೀಶ್ ಕುಮಾರ್, ಬಿ.ನಾಗೇಶ್ ಕರ್ಕೇರ, ಜಿ.ಇ ಚಂದ್ರೇಶ್, ಶ್ರೀಮತಿ ಗಾಯತ್ರಿ ಗಣೇಶ್, ಎಂ ರಾಮಚಂದ್ರ, ಬಿ ಸದಾನಂದ, ಶ್ರೀಮತಿ ರಾಜಮ್ಮ, ರಮಣಿ ಉಮೇಶ್, ಚಂದ್ರ ಪ್ರಭಾ ದಿವಾಕರ್, ಉಷಾ ಅಮೃತ್ ಕುಮಾರ್, ತಿಲೋತ್ತಮ ಎನ್. ಕರ್ಕೇರ, ವೆಂಕಟೇಶ್ ದಾಸ್, ಪದ್ಮನಾಭ ಕೋಟ್ಯಾನ್, ಬಿ ಹರಿಪ್ರಸಾದ್, ಗೋಪಾಲ್ ಕೋಟ್ಯಾನ್, ಗಾಯತ್ರಿ ಎಮ್ ಸುವರ್ಣ, ಚೇತನ್ ಕುಮಾರ್, ಲತೀಶ್, ರಾಹುಲ್, ಜಯರಾಮ ಕಾರಂದೂರು, ಪುರುಷೋತ್ತಮ ಎಲ್ ಸುವರ್ಣ, ಬಿ ರಮೇಶ್, ಪ್ರವೀಣ್ ಕುಮಾರ್ ಸಾಲ್ಯಾನ್, ಮನೋಜ್ ಅಮೀನ್, ಶ್ರೀ ಬಿ. ಶ್ರೀನಿವಾಸ್, ಸತೀಶ್ ಸಾಲ್ಯಾನ್, ರಂಜಿತ್ ದಂಬೆಲ್, ಸುಧಾಕರ್ ಬೋಳೂರು, ಚಂದ್ರಿಕಾ ರಾಮಚಂದ್ರ, ಭಾಗೀರಥಿ, ಯಶೋಧ ಶಿವಾನಂದ, ಸುಮಂಗಲ ಸಿ ಕೋಟ್ಯಾನ್, ಶೀಲಾ ಇವರು ಉಪಸ್ಥಿತರಿದ್ದರು.