Monday, November 25, 2024
ಸುದ್ದಿ

ಆರ್ಥಿಕ ಹಿಂಜರಿತ ತಡೆಗೆ ಕೇಂದ್ರದ ಕ್ರಮ: ಕಾರ್ಪೋರೇಟ್ ತೆರಿಗೆಯನ್ನು ಇಳಿಸಿದ ಕೇಂದ್ರ ಸರ್ಕಾರ, ಸೆನ್ಸೆಕ್ಸ್‍ನಲ್ಲಿ ಭಾರಿ ಏರಿಕೆ – ಕಹಳೆ ನ್ಯೂಸ್

ನವದೆಹಲಿ: ಆರ್ಥಿಕ ಹಿಂಜರಿಕೆ ತಡೆದು, ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶಿಯ ಉತ್ಪಾದನಾ ಕಂಪನಿಗಳ ಕಾರ್ಪೋರೇಟ್ ತೆರಿಗೆಗಳನ್ನು ಇಳಿಸಲು ನಿರ್ಧರಿಸಿದೆ.

ಗೋವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಘೋಷಣೆ ಮಾಡಿದರು. ಕಾರ್ಪೋರೇಟ್ ತೆರಿಗೆಗಳನ್ನು ಕಡಿತಗೊಳಿಸುವ ಸುಗ್ರಿವಾಜ್ಞೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶಿಯ ಕಂಪನಿಗಳು ಪಾವತಿಸುವ ಆದಾಯ ತೆರಿಗೆಯನ್ನು 1919-20ನೇ ಸಾಲಿನ ಬಜೆಟ್‍ನಲ್ಲಿ ಹೆಚ್ಚಿಸಲಾಗಿತ್ತು. ಆದರೆ ಈಗ ಅದನ್ನು ಶೇ.22ಕ್ಕೆ ಇಳಿಸಲಾಗಿದೆ. ಈ ಎಲ್ಲ ಕಡಿತಗಳಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿರೀಕ್ಷಿಸಲಾಗಿದ್ದ ಆದಾಯದಲ್ಲಿ 1,45,000 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸಕ್ತ ಸಾಲಿನ ಜೂನ್ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗಿದ್ದ ಆರ್ಥಿಕ ಪ್ರಗತಿಯ ಮಾಹಿತಿಯ ಪ್ರಕಾರ 6 ವರ್ಷಗಳ ಕನಿಷ್ಠ ಶೇ.5ಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಲ್ಲದೆ, ಉದ್ಯೋಗಗಳನ್ನು ಕಡಿತಗೊಳಿಸಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದವು. ಈ ಪರಿಸ್ಥಿತಿಯನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ವಾರ ಅನೇಕ ಆರ್ಥಿಕ ಉತ್ತೇಜನ ಘೋಷಿಸಿತ್ತು. ತನ್ಮೂಲಕ ವಸತಿ ವಲಯ ಹಾಗೂ ರಫ್ತಿಗೆ ಸಾಕಷ್ಟು ಉತ್ತೇಜನ ದೊರೆತಿತ್ತು.

1155 ಅಂಶ ಏರಿಕೆ ಕಂಡ ಸೆನ್ಸೆಕ್ಸ್: 

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶಿಯ ಉತ್ಪಾದನಾ ಕಂಪನಿಗಳ ಕಾರ್ಪೋರೇಟ್ ತೆರಿಗೆ ಹಾಗೂ ಆದಾಯ ತೆರಿಗೆ ಇಳಿಸಿರುವ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಮುಂಬೈ ಷೇರುಪೇಟೆಯಲ್ಲಿ ಭಾರಿ ತೇಜಿ ಕಂಡುಬಂದಿತು. ಬಾಂಬೆ ಸ್ಟಾಕ್ ಎಕ್ಸ್‍ಚೇಂಜ್ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಆರಂಭದಲ್ಲಿ 800 ಅಂಶ ಏರಿಕೆ ದಾಖಲಿಸಿತ್ತು. ನೋಡು ನೋಡುತ್ತಿದ್ದಂತೆ ಅದು 1,155 ಅಂಶಗಳಿಗೆ ಹೆಚ್ಚಳವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿಯಲ್ಲಿ ಕೂಡ ತೇಜಿ ಕಂಡುಬಂದಿತು.