Monday, November 25, 2024
ಸುದ್ದಿ

ಕೊನೆಗೂ ಸಂಪರ್ಕಕ್ಕೆ ಸಿಗದ ವಿಕ್ರಮ್; ಚಂದ್ರನ ಅಂಗಳದಲ್ಲಿ -200 ಡಿಗ್ರಿ ಸೆಲ್ಸಿಯಸ್ ಶೀತಗಾಳಿ – ಕಹಳೆ ನ್ಯೂಸ್

ಬೆಂಗಳೂರು : ಬಹುನಿರೀಕ್ಷೆಯ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಹಾಗೂ ನಾಸಾ ಯತ್ನಿಸಿ ವಿಫಲವಾಗಿದ್ದು, ಈ ಮೂಲಕ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಶಾಶ್ವತವಾಗಿ ಕಾರ್ಯನಿರ್ವಹಿಸದೆ ಅಂತ್ಯಕಾಣಲಿದೆ ಎಂದು ವರದಿ ತಿಳಿಸಿದೆ.

ವಿಕ್ರಮ್ ಲ್ಯಾಂಡರ್ ಇಳಿಯಲಿದ್ದ ಚಂದ್ರನಲ್ಲಿ ಪ್ರದೇಶದಲ್ಲಿ ಬರೋಬ್ಬರಿ ಮೈನಸ್ 200ಡಿಗ್ರಿ ಸೆಲ್ಸಿಯಸ್ ಶೀತಗಾಳಿ ಬೀಸುತಿದೆ. ಒಂದು ವೇಳೆ ಸೆಪ್ಟೆಂಬರ್ 7ರಂದು ಚಂದ್ರಯಾನ-2ರ ವಿಕ್ರಮ್ ಇಳಿದಿದ್ದರು ಕೂಡಾ ಅದು ಭೂಮಿಯ ಜತೆಗಿನ ಸಂಪರ್ಕ ಕಡಿತವಾಗುತ್ತಿತ್ತು. ಚಂದ್ರನಲ್ಲಿನ ಭಾರೀ ಶೀತಗಾಳಿಯಿಂದ ಲ್ಯಾಂಡರ್‍ನ ಕಾರ್ಯ ಸ್ಥಗಿತಗೊಳ್ಳುವುದಾಗಿ ವರದಿ ವಿವರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ವಿಕ್ರಮ್ ಲ್ಯಾಂಡರ್‍ನ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಖಚಿತಪಡಿಸಬೇಕಾಗಿದೆ. ಆದರೆ ಕೊನೆಯ ದಿನಗಳಲ್ಲಿ ಬಾಹ್ಯಾಕಾಶ ಸಂಸ್ಥೆ ವಿಕ್ರಮ್ ಲ್ಯಾಂಡರ್ ಜತೆಗಿನ ಮರು ಸಂಪರ್ಕದ ಭರವಸೆಯನ್ನು ಕಳೆದುಕೊಂಡಿತ್ತು. ಇದರೊಂದಿಗೆ ಆರು ಚಕ್ರವನ್ನೊಳಗೊಂಡ ಪ್ರಗ್ಯಾನ್ ರೋವರ್ ಕಾರ್ಯ ಕೂಡಾ ಅಂತ್ಯಗೊಂಡಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದ್ದ ವಿಕ್ರಮ್ ಲ್ಯಾಂಡರ್ ಅನ್ನು ಮರು ಸಂಪರ್ಕಿಸುವ 14 ದಿನಗಳ ಗುಡುವು ಇಂದಿಗೆ ಮುಕ್ತಾಯವಾಗಲಿದೆ. ಆದರೆ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಯೋಜನೆಯಲ್ಲಿ ಯಶಸ್ವಿ ಸಾಧಿಸುವಲ್ಲಿ ಇಸ್ರೋ ವಿಜ್ಞಾನಿಗಳು ದೃಢ ವಿಶ್ವಾಸ ಹೊಂದಿದ್ದಾರೆ.

ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಮಿಷನ್ ನಲ್ಲಿ ಎಲ್ಲರೂ ನಮ್ಮ ಜತೆ ಬೆಂಬಲ ವ್ಯಕ್ತಪಡಿಸಿ ಹುರಿದುಂಬಿಸಿದ್ದಕ್ಕೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದೆ. ಚಂದ್ರಯಾನ-2ರ ಆರ್ಬಿಟರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಅಪ್ ಗ್ರೇಡ್ ಮಾಡುವುದಾಗಿ ಇಸ್ರೋ ತಿಳಿಸಿದೆ.