Monday, January 20, 2025
ಸುದ್ದಿ

ಪುತ್ತೂರು, ಉಪ್ಪಿನಂಗಡಿ ಠಾಣೆಯಲ್ಲಿ ಸೈನಿಕರಿಗೆ ಅಪಮಾನಿಸಿ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ಗಲಭೆಗೆ ಕುಮ್ಮಕ್ಕು ನೀಡುವಂತೆ ಭಾಷಣಮಾಡಿದ ಎಸ್.ಡಿ.ಪಿ.ಐ. ಮುಖಂಡರ ಮೇಲೆ ದೂರು ದಾಖಲು ; ವಿ.ಎಚ್.ಪಿ., ಬಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆಯಿಂದ ದೂರು – ಕಹಳೆ ನ್ಯೂಸ್

ಪುತ್ತೂರು :ಸೆ 20: ಪುತ್ತೂರಿನಲ್ಲಿ ನಿನ್ನೆ SDPI ನಡೆಸಿದ ಪ್ರತಿಭಟನೆ ಸಭೆಯಲ್ಲಿ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ಹಿಂದೂ ಜಾಗರಣೆ ವೇದಿಕೆಯ ಉಪಾಧ್ಯಕ್ಷರಾದ ದಿನೇಶ್ ಪಂಜಿಗ ಹಾಗೂ ವಿ.ಎಚ್.ಪಿ. ಮತ್ತು ಬಜರಂಗದಳ ಪುತ್ತೂರು ಘಟಕ, ಎರಡೂ ಸಂಘಟನೆಗಳು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ಪುತ್ತೂರಿನಲ್ಲಿ ನೀಡಿದ ದೂರಿನ ಪ್ರತಿಗಳು :

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ರೀತಿ ಉಪ್ಪಿನಂಗಡಿ ಠಾಣೆಯಲ್ಲಿ ವಿ.ಎಚ್.ಪಿ. ಮತ್ತು ಬಜರಂಗದಳ ದೂರು ನೀಡಿದೆ.


ದೂರಿನಲ್ಲಿ ಜಾಬೀರ್ ಅರಿಯಡ್ಕ ಸಿದ್ದಿಕ್ ,ಬಷೀರ್ ಕೂರ್ನಡ್ಕ ಎಂಬವರು ಪ್ರತಿಭಟನ ಸಭೆಯಲ್ಲಿ ಭಾರತದ ಸೈನಿಕರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿ ಭಾರತೀಯ ಸೈನಿಕರ ಮತ್ತು ಸೈನ್ಯ ವ್ಯವಸ್ಥೆಯನ್ನು ಅವಮಾನಿಸಿ ಕೋಮು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸೆ 19 ರಂದು ಗುರುವಾರ ಪುತ್ತೂರಿನ KSRTC ಬಸ್ಸು ತಂಗುದಾಣದ ಬಳಿ SDPI ನೇತ್ರತ್ವದಲ್ಲಿ ಜಾಬೀರ್ ಅರಿಯಡ್ಕ ಎಂಬಾತನು “ಭಾರತೀಯ ಸೈನಿಕರು ಕಾಶ್ಮೀರದಲ್ಲಿ ಮುಸ್ಲಿಂ ರನ್ನು ಆಪಲ್ ಗಿಡದಂತೆ ಕತ್ತರಿಸುತಿದ್ದಾರೆ, ಸೈನಿಕರ ಮನಸ್ಸಿನಲ್ಲಿ ಮತ್ತು ಅವರ ಹೃದಯದಲ್ಲಿ ಕೋಮು ಭಾವನೆ ಇದೇ . ಅವರು RSS ಮತ್ತು ಸಂಘ ಪರಿವಾರದ ಶಾಖೆಯಿಂದ ಬಂದವರು ಎಂಬುವುದಾಗಿ ಭಾರತೀಯ ಮತ್ತು ಸೈನ್ಯ ವ್ಯವಸ್ಥೆಯ ವಿರುದ್ದ ಮಾತನಾಡಿ ವೀರ ಸೈನಿಕರಿಗೆ ಅವಮಾನ ಮಾಡಿರುತ್ತಾನೆ ಮತ್ತು ಭಾರತದಲ್ಲಿ ಎಲ್ಲ ಮುಸ್ಲಿಂ ರು ಇವರ ವಿರುದ್ದ ಹೋರಾಟ ಮಾಡಬೇಕು ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದರಾಗಬೇಕು” ಎಂದು ಸೈನಿಕರ ವಿರುದ್ದ ಎತ್ತಿ ಕಟ್ಟಿ ಪ್ರಚೋದನೆ ನೀಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭಾಷಣದ ವಿಡಿಯೋ ನೋಡಲು ಕೆಳಗಿನ ಲಿಂಕ್ ತೆರೆಯಿರಿ :

 

ದೇಶದ್ರೂಹಿ ಹೇಳಿಕೆ ನೀಡಿರುವ ಎಸ್.ಡಿ.ಪಿ.ಐ. ಮುಖಂಡರಾದ ಜಾಬೀರ್ ಅರಿಯಡ್ಕ ಸಿದ್ದಿಕ್ ,ಬಷೀರ್ ಕೂರ್ನಡ್ಕ ಹಾಗೂ ಕಾರ್ಯಕ್ರಮ ಸಂಘಟಿಸಿದ ಸಂಘಟಕರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅವರು ದೂರಿನಲ್ಲಿ ವಿನಂತಿ ಸಿದ್ದಾರೆ . ದೂರನ್ನು ಸ್ವೀಕರಿಸಿ ಸ್ವೀಕೃತಿ ಪತ್ರವನ್ನು ಠಾಣೆಯಿಂದ ದೂ ರುದಾರರಿಗೆ ನೀಡಲಾಗಿದೆ.