Monday, November 25, 2024
ಸುದ್ದಿ

ನವರಾತ್ರಿ ಉತ್ಸವಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಶಾಸಕ ಕಾಮತ್ ಸೂಚನೆ – ಕಹಳೆ ನ್ಯೂಸ್

ಇದೇ ಸೆಪ್ಟೆಂಬರ್ 28ರಿಂದ ಮಂಗಳೂರು ಮಹಾನಗರದಲ್ಲಿ ನವರಾತ್ರಿ ಹಬ್ಬದ ಆಚರಣೆಗಳು ಪ್ರಾರಂಭವಾಗಲಿದ್ದು, ವಿವಿಧ ಸೇವಾ ಸಮಿತಿಗಳಿಂದ ಹಲವೆಡೆ ಸಾರ್ವಜನಿಕ ಶಾರದಾ ಮಹೋತ್ಸವಗಳು ನಡೆಯಲಿವೆ. ಮೈಸೂರಿನಂತೆ ಆದ್ದೂರಿಯಾಗಿ ಇಲ್ಲಿ ಕೂಡ ಮಂಗಳೂರು ದಸರಾ ಉತ್ಸವವನ್ನು ಆಚರಿಸಲಾಗುತ್ತದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಅದೇ ರೀತಿಯಲ್ಲಿ ವಿವಿಧ ದೇವಿ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಯಾವುದೇ ಯುವಕ ಮಂಡಲಗಳು, ಶಾರದಾ ಮಹೋತ್ಸವ ಸೇವಾ ಸಮಿತಿಯವರು ಸಾರ್ವಜನಿಕ ಶಾರದಾ ಮಹೋತ್ಸವವನ್ನು ಆಚರಿಸಲು ವಿದ್ಯುತ್ ಸಂಪರ್ಕದ ಬಗ್ಗೆ ಅರ್ಜಿ ಸಲ್ಲಿಸಿದ್ದಲ್ಲಿ ಮೆಸ್ಕಾಂ ಕಚೇರಿಯಿಂದ ಯಾವುದೇ ವಿಳಂಬ ಮಾಡದೇ ಮಂಜೂರು ಮಾಡಬೇಕು. ಹಾಗೆ ಶಾರದಾ ಮಾತೆಯ ಶೋಭಾಯಾತ್ರೆ ಮಂಗಳೂರಿನ ಹಲವು ಪ್ರಮುಖ ಬೀದಿಗಳಲ್ಲಿ ಸಂಚರಿಸುವುದರಿಂದ ಎಲ್ಲಾ ರಸ್ತೆಗಳಲ್ಲಿ ಯಾವುದೇ ಹೊಂಡ, ಗುಂಡಿಗಳಿದ್ದಲ್ಲಿ ಅದನ್ನು ತಕ್ಷಣ ಮುಚ್ಚಿ ಶೋಭಾಯಾತ್ರೆ ಸರಾಗವಾಗಿ ಸಾಗಲು ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಶೋಭಾಯಾತ್ರೆ ಅಥವಾ ಇತರ ಯಾವುದೇ ಅನುಮತಿ ಪೊಲೀಸ್ ಕಮೀಷನರೇಟ್ ಕಚೇರಿಯಿಂದ ಕೊಡಲು ಸಹಕರಿಸಬೇಕೆಂದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸೂಚನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು