Recent Posts

Monday, January 20, 2025
ಸುದ್ದಿ

ಅನಾರೋಗ್ಯದಿಂದ ಬಳಲುತ್ತಿರುವ ಯಕ್ಷಗಾನ ಕಲಾವಿದನಿಗೆ ನೆರವು ನೀಡುವಂತೆ ಮನವಿ – ಕಹಳೆ ನ್ಯೂಸ್

ಯಕ್ಷಗಾನ ಪ್ರಸಿದ್ಧ ಹಿಮ್ಮೇಳ ವಾದಕ ಕಡಬ ದಿ! ನಾರಾಯಣ ಆಚಾರ್ಯ ಅವರ ಮಗ ವಿನಯ್ ಅವರ ಚಿಕಿತ್ಸೆಗೆ ನೆರವು ಬೇಕಾಗಿದೆ. ಯಕ್ಷಗಾನದ ಮದ್ದಲೆ ವಾದಕರಾದ ಕಡಬ ವಿನಯ ಆಚಾರ್ಯ, ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅನೇಕ ಆಸ್ಪತ್ರೆಗಳಿಗೆ ದಾಖಲಾಗಿ, ಇದೀಗ ಗಂಭೀರ ಸ್ಥಿತಿಯಲ್ಲಿರುವ ಕಾರಣ ಮಂಗಳೂರಿನ ಎ.ಜೆ .ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಚಿಕಿತ್ಸೆಗಾಗಿ ಈಗಾಗಲೇ ಕುಟುಂಬದವರು ಲಕ್ಷಾಂತರ ಹಣವನ್ನು ವ್ಯಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಧ್ರುವ ಪ್ರತಿಷ್ಠಾನ ( ರಿ ) ಮಂಗಳೂರು ಇವರು ಈಗಾಗಲೇ 25,000 ರೂ ನೆರವು ನೀಡಿ ಸಹಕರಿಸಿದ್ದಾರೆ. ಆಸ್ಪತ್ರೆಯ ಬಿಲ್ ಈಗಾಗಲೇ ದೊಡ್ಡ ಮೊತ್ತಕ್ಕೆ ಬಂದು ತಲುಪಿದೆ. ಆದರೂ, ಬಿಲ್ ಪಾವತಿಸಲು ಅವರ ಕುಟುಂಬದಲ್ಲಿ ಯಾವುದೇ ಸಂಪನ್ಮೂಲಗಳಿಲ್ಲ. ಈಗಲೂ ಗಂಭೀರ ಸ್ಥಿತಿಯಲ್ಲಿರುವ ಯಕ್ಷಗಾನ ಕಲಾವಿದ ವಿನಯ ಅವರ ಚಿಕಿತ್ಸೆಗಾಗಿ ತುಂಬಾ ಹಣದ ಅಗತ್ಯವಿದೆ . ಈ ಕುಟುಂಬ ಇಷ್ಟರ ತನಕ ಯಾರಲ್ಲೂ ನೆರವು ಕೇಳಿರಲಿಲ್ಲ. ಆದರೆ, ಈಗಿನ ಸ್ಥಿತಿಯು ಕೈ ಮೀರಿ ಹೋಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನ ಪ್ರೇಮಿಗಳು ಹಾಗೂ ಸಹೃದಯ ಬಂಧುಗಳು ಚಿಕಿತ್ಸೆಗೆ ನೆರವಾಗಬೇಕಾಗಿ ಕಳಕಳಿಯ ವಿನಂತಿ. ಸಣ್ಣ ಪ್ರಾಯದ ನನ್ನ ತಮ್ಮ ಕಡಬ ವಿನಯ ಆಚಾರ್ಯ ಮರಳಿ ಯಕ್ಷರಂಗದಲ್ಲಿ ದುಡಿಯುವಂತಾಗಬೇಕಾದರೆ, ದಾನಿಗಳು ನೆರವಾಗಬೇಕು ಎಂದು ವಿನಯ ಆಚಾರ್ಯ ಅವರ ಅಣ್ಣ ಕಡಬ ವಿಶ್ವನಾಥ ಆಚಾರ್ಯ ವಿನಂತಿಕೊಂಡಿಸಿದ್ದಾರೆ. ಸಹಾಯ ಮಾಡಲಿಚ್ಚಿಸುವವರು ಈ ಬ್ಯಾಂಕ್ ಖಾತೆಗೆ ಹಣವನ್ನು ನೀಎಇ ಸಹಕರಿಸ ಬಹುದು.

ಬ್ಯಾಂಕ್ ವಿವರ ಈ ಕೆಳಗಿನಂತಿದೆ: 

Vishwanath Acharya ,
Canara Bank ,
Vamadapadau ,
IFSC0001549
A/c no – 1549101058461