Recent Posts

Sunday, January 19, 2025
ಸುದ್ದಿ

ಧರ್ಮಸ್ಥಳ ಗ್ರಾಮದ ಗಂಗೋತ್ರಿ ವಸತಿ ಗೃಹದ ಬಳಿ ದ್ವಿಚಕ್ರ ವಾಹನದಲ್ಲಿ ಸುಮಾರು 60 ಗ್ರಾಂ ಗಾಂಜಾ; ವ್ಯಕ್ತಿ ಬಂಧನ – ಕಹಳೆ ನ್ಯೂಸ್

ದಿನಾಂಕ 20, ಶುಕ್ರವಾರದಂದು ಮಧ್ಯ ರಾತ್ರಿ 01.30 ಗಂಟೆಗೆ ಧರ್ಮಸ್ಥಳ ಗ್ರಾಮದ ಗಂಗೋತ್ರಿ ವಸತಿ ಗೃಹದ ಬಳಿ ಕೆಎ-19-ಇಎಕ್ಸ್-8570 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದ ಅನುಮಾನಸ್ಪಾದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರು ಠಾಣಾ ಸಿಬ್ಬಂಧಿಗಳೊಂದಿಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬೀಟ್ ತಿರುಗುತ್ತಿರುವಾಗ ಈತ ಸಿಕ್ಕಿಬಿದ್ದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿಯ ಉಳಾಯಿಬೆಟ್ಟು ಗ್ರಾಮದ ನಿವಾಸಿ ಪ್ರದೀಪ್ ಪೂಜಾರಿ ಪ್ರಾಯ 26 ವರ್ಷ ಎಂಬಾತನನ್ನು ತಡೆದು ವಿಚಾರಿಸಿದಾಗ ಆತನ ದ್ವಿಚಕ್ರ ವಾಹನದಲ್ಲಿ ಸುಮಾರು 60 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ ಬಗ್ಗೆ ವಿಚಾರಿಸಿದಾಗ ಈ ಗಾಂಜಾವನ್ನು ತನ್ನ ಸ್ವಂತ ಉಪಯೋಗಕ್ಕೆ ಮತ್ತು ಮಾರಾಟ ಮಾಡುವುದಕ್ಕಾಗಿ ಇರಿಸಿರುವುದಾಗಿ ತಿಳಿಸಿರುತ್ತಾನೆ. ಈತನ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 20(B)(ii)(A), 27(B) NDPS ACT ನಂತೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಯು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಸಬ್ ಜೈಲ್ ನಡೆದ ಮಾಡೂರು ಇಸುಬು ಎಂಬಾತನ ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆಗೆ ಯತ್ನ ಮತ್ತು ಮುಲ್ಕಿ ಠಾಣೆಯಲ್ಲಿ ಡಕಾಯಿತಿಗೆ ಯತ್ನ ಪ್ರಕರಣಗಳು ದಾಖಲಾಗಿ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಈತನು ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.