Recent Posts

Sunday, January 19, 2025
ಸುದ್ದಿ

ಸೈನಿಕರಿಗೆ ಅಪಮಾನಿಸಿದ ಪುತ್ತೂರಿನ ಎಸ್.ಡಿ.ಪಿ.ಐ. ಮುಖಂಡರುಗಳ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಎಫ್.ಐ.ಆರ್. ದಾಖಲು‌ – ಕಹಳೆ ನ್ಯೂಸ್

ಪುತ್ತೂರು: ಕಳೆದೆರಡುದಿನಗಳ ಹಿಂದೆ ಪುತ್ತೂರು ಬಸ್ ಸ್ಟಾಂಡ್ ಬಳಿ ನಡೆಸಿದ ಎಸ್.ಡಿ.ಪಿ.ಐ ಮುಖಂಡರು ಪ್ರತಿಭಟನಾ ಸಭೆಯಲ್ಲಿ ದೇಶದ್ರೋಹಿ ಭಾಷಣವನ್ನು ಮಾಡಿದ್ದು, ಭಾರತೀಯ ಸೈನಿಕರಿಗೆ ಅವಮಾನ ಮಾಡಿರುವುದಲ್ಲದೆ ಭಾರತೀಯ ಸೈನಿಕರು ಕಾಶ್ಮೀರದಲ್ಲಿ ಮುಸ್ಲಿಮರನ್ನು ಆಪಲ್ ಗಿಡದಂತೆ ಕತ್ತರಿಸುತ್ತಿದ್ದಾರೆ, ಸೈನಿಕರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಕೋಮು ಭಾವನೆ ಇದೆ, ಇವರು ಆರ್.ಎಸ್.ಎಸ್ ಮತ್ತು ಸಂಘ ಪರಿವಾರದ ಶಾಖೆಯಿಂದ ಬಂದವರು ಎಂಬುದಾಗಿ ಸೈನಿಕರು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.ಸೈನ್ಯದ ವ್ಯವಸ್ಥೆಯ ಬಗ್ಗೆ ಅಪಮಾನಿಸಿದ ಎಸ್.ಡಿ.ಪಿ.ಐ ಮುಖಂಡರ ವಿರುದ್ಧ ಪುತ್ತೂರು ಹಾಗೂ ಉಪ್ಪಿನಂಗಡಿ ಠಾಣೆಗಳಲ್ಲಿ ದೇಶ ಭಕ್ತರು ಪ್ರಕರಣ ನೀಡಿದ್ದು, ಇದರಂತೆ ದಿನೇಶ್ ಪಂಜಿಗಾ ಇವರು ಪಿರ್ಯಾಧಿದಾರರಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಜಾಬಿರ್ ಅರಿಯಡ್ಕ, ಸಿದ್ದಿಕ್, ಕಾರ್ಯಕ್ರಮದ ಆಯೋಜಕರ ವಿರುದ್ಧ ಐಪಿಸಿ ಸೆಕ್ಷನ್ 153(A), 505(2) ರಂತೆ ಪ್ರಕರಣ ದಾಖಲಾಗಿದೆ.ಇದರಂತೆ ಸೈನಿಕರ ವಿರುದ್ಧ ಮಾತನಾಡುವ ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದಾಗಿ ಪುತ್ತೂರಿಗರ ಆಶ್ರಯ.

ಜಾಹೀರಾತು

ಜಾಹೀರಾತು
ಜಾಹೀರಾತು