ಮೈಸೂರು[ಸೆ.22]: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ ಬಂದ ಆದೇಶದ ಪ್ರಕಾರ ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಆದೇಶದವರೆಗೆ ಜನಪ್ರತಿನಿಧಿಗಳು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ಮೈಸೂರು ದಸರಾ ಪೋಸ್ಟರ್ ಸೇರಿದಂತೆ ಎಲ್ಲಿಯೂ ಜನಪ್ರತಿನಿಧಿಗಳ ಭಾವಚಿತ್ರ ಬಳಸುವಂತಿಲ್ಲ. ಹುಣಸೂರು ಗ್ರಾಮೀಣ ದಸರಾ ಬಗ್ಗೆ ಇನ್ನಷ್ಟೇ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಮೈಸೂರು ದಸರಾಕ್ಕಾಗಿ ವಿನಾಯಿತಿ ಕೇಳಿದ್ದೇವೆ. ಚುನಾವಣಾ ಆಯೋಗದಿಂದ ಇನ್ನೆರಡು ದಿನದಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದರು.
ದಸರಾ ಕಾರ್ಯಕ್ರಮದಲ್ಲಿ ಬದಲಾವಣೆ ಇರೋಲ್ಲ. ಆದ್ರೆ ವಿನಾಯಿತಿ ಪಡೆದು ಕಾರ್ಯಕ್ರಮಗಳನ್ನ ನಡೆಸುತ್ತೇವೆ. ದಸರಾ ಉಪಸಮಿತಿಗಳ ಮೇಲೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಸದ್ಯಕ್ಕೆ ನೀತಿಸಂಹಿತೆ ಇಡೀ ಜಿಲ್ಲೆಗೆ ಜಾರಿಯಲ್ಲಿದೆ. ಮುಂದಿನ ಆದೇಶ ಬಂದ ನಂತರವಷ್ಟೆಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.