Sunday, November 10, 2024
ಸುದ್ದಿ

ನಜ್ಮಾ ನಝೀರ್ ಚಿಕ್ಕನೇರಳೆ ರವರು ರಚಿಸಿದ ‘ಪಿವೋಟ್ ಪದ್ಯಗಳು’ ಪುಸ್ತಕ ಲೋಕಾರ್ಪಣೆ – ಕಹಳೆ ನ್ಯೂಸ್

ಮಂಗಳೂರು(22 ): ಮಂಗಳೂರಿನ ಸಾಹಿತ್ಯಾಸಕ್ತರ ಬಳಗದಿಂದ ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಜ್ಮಾನಝೀರ್ ಚಿಕ್ಕನೇರಳೆ ಯವರು ರಚಿಸಿದ ‘ಪಿವೋಟ್ ಪದ್ಯಗಳು’ ಪುಸ್ತಕವು ಬಿಡುಗಡೆಗೊಂಡಿತು. ವಿವಿ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪಟ್ಟಾಭಿರಾಮ ಸೋಮಯಾಜಿಯವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು ಇಂದಿನ ಯುವ ಜನಾಂಗದಲ್ಲಿ ಕಾವ್ಯ, ಸಾಹಿತ್ಯದ ಗಂಧಗಾಳಿಯೇ ಇಲ್ಲ. ಮಾತುಮಾತಿಗೆ ದ್ವೇಷಗಳು ಹಿಂಬಾಲಿಸುತ್ತವೆ. ಇಂತಹ ವಿಷಮ ಸ್ಥಿತಿಯಲ್ಲಿ ಯುವ ಜನಾಂಗವನ್ನು ಎಚ್ಚರಿಸುವ ಅಗತ್ಯವಿದೆ. ಆ ಹಿನ್ನಲೆಯಲ್ಲಿ ‘ಪಿವೋಟ್ ಪದ್ಯಗಳು’ ಸಮಾಜವನ್ನು ಎಚ್ಚರಿಸುವ ಪ್ರತಿರೂಪದಂತೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮ ಪರೀಕ್ಷೆಗಳ ತರಬೇತುದಾರೆ ಯು.ಟಿ ಅಯಿಷಾ ಫರ್ಝಾನ ಅಶ್ರಫ್, ಪುಸ್ತಕದ ಲೇಖಕಿ ನಜ್ಮಾ ನಝೀರ್ ಚಿಕ್ಕನೇರಳೆ, ರಾಜ್ ನ್ಯೂಸ್ ನ ಕಾರ್ಯಕ್ರಮ ನಿರೂಪಕ ರಾ.ಚಿಂತನ್ ರವರುಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಕರ್ತ ಸಂಶೀರ್ ಬಡೋಳಿ ಸ್ವಾಗತಿಸಿ ಅಬ್ದುರ್ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.