Recent Posts

Monday, January 20, 2025
ಸುದ್ದಿ

ಅಶ್ಲೀಲ ಪೋಟೋ ಪೋಸ್ಟ್ ಮಾಡಿದ ಪುಂಜಾಲಕಟ್ಟೆಯ ಯುವಕ ಅರೆಸ್ಟ್ – ಕಹಳೆ ನ್ಯೂಸ್

ಪುಂಜಾಲಕಟ್ಟೆ, ಸೆ 22 : ಯುವತಿಯೋರ್ವಳ ಅಶ್ಲೀಲ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಮಾನಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನು ಜಿತೇಶ್ ಸಪಲ್ಯ ಮಂಜೇಶ್ವರದ ನಿವಾಸಿ. ಈತ ಒರ್ವ ಯುವತಿಯ ಜೊತೆ 2-3 ವರ್ಷಗಳಿಂದ ಗೆಳತನ ಹೊಂದಿದ್ದು, ಮದುವೆಯಾಗಲು ಬಯಸಿದ್ದ, ಆದರೆ ಮದುವೆಗೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ದ್ವೇಷದಿಂದ ಆಕೆಯ ಅಶ್ಲೀಲ ಭಾವಚಿತ್ರಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಜಾಲಾತಾಣದಲ್ಲಿ ಹರಿಯ ಬಿಟ್ಟಿದ್ದ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು