ಪುತ್ತೂರು ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ, ಬೂಡಿಯಾರು ಹೊಸಮನೆ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆ- ಕಹಳೆ ನ್ಯೂಸ್
ಪುತ್ತೂರು: ನವದುರ್ಗಾರಾಧನಾ ಸಮಿತಿಯಿಂದ ಆಚರಿಸಲ್ಪಡುವ ಪುತ್ತೂರು ದಸರಾ ಮಹೋತ್ಸವ ಸೆಪ್ಟೆಂಬರ್ 29 ರಿಂದ ಅಕ್ಟೊಬರ್ 10 ರವರೆಗೆ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರ ಉದಯಗಿರಿ ಸಂಪ್ಯ ಪುತ್ತೂರು ಇಲ್ಲಿ ವಿಜೃಂಭಣೆಯಿಂದ ಆರಾಧಿಸಲ್ಪಡಲಿದೆ. ಪುತ್ತೂರು ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ, ಬೂಡಿಯಾರು ಹೊಸಮನೆ ಇಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಸಂಪ್ಯ ಠಾಣಾ ಎದುರುಗಡೆ, ಸಂಪ್ಯ ಗಣೇಶೋತ್ಸವ ಪೆಂಡಾಲಿನಡಿಯಲ್ಲೇ ದುಷ್ಕರ್ಮಿ ಸಮಾಜ ದ್ರೋಹಿಗಳಿಂದ ದಾರುಣವಾಗಿ ಹತ್ಯೆಗೀಡಾದ ಹಿಂದೂ ಮುಖಂಡ , ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ ಶ್ರೀ ಕಾರ್ತಿಕ್ ಸುವರ್ಣ ಮೇರ್ಲ ಇವರ ಆತ್ಮಕ್ಕೆ ಚಿರಶಾಂತಿ ವೈಕುಂಠ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಲಾಯಿತು.
ಹಾಗೇಯೇ ವಿಘ್ನ ನಿವಾರಕನ ಸಮ್ಮುಖದಲ್ಲಿಯೇ ವಿಘ್ನ ತಂದ ಕೊಲೆಪಾತಕಿಗಳಿಗೆ, ಕೊಲೆಯ ಹಿಂದಿರುವ ಕಾಣದ ಕೈಗಳಿಗೆ ಶ್ರೀದೇವಿಯೇ ಶೀಘ್ರದಲ್ಲಿ ಅತ್ಯುಗ್ರ ಶಿಕ್ಷೆಯನ್ನು ನೀಡಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಕ್ಷೇತ್ರದ ಬ್ರಹ್ಮಕಲಶಾದಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಮನಿತ್ ಕುಮಾರ್ ಇವರು ತಮ್ಮ ಮೆಸ್ಕಾಂನ ವೃತ್ತಿನಿರತ ಸಂಧರ್ಬದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಇವರು ಶೀಘ್ರ ಗುಣಮುಖರಾಗಲೆಂದು ಶ್ರೀ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಕುಕ್ಕಾಡಿ ತಂತ್ರಿಗಳಾದ ಶ್ರೀ ಪ್ರೀತಂ ಪುತ್ತೂರಾಯ , ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ ಬೂಡಿಯಾರು ಇದರ ಆಡಳಿತ ಸಮಿತಿ ಅಧ್ಯಕ್ಷರಾದ ಗಂಗಾಧರ ಅಮೀನ್ ಹೊಸಮನೆ, ಶ್ರೀ ಮಹಾಮಾರಿಯಮ್ಮ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ರವಿಚಂದ್ರ ಆಚಾರ್ಯ ಆರ್ಯಾಪು, ಶ್ರೀ ಮಹಾಮಾರಿಯಮ್ಮ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್. ಪಿ ನೇರಳಕಟ್ಟೆ , ರೋಟರಿ ಸ್ವರ್ಣ ಪುತ್ತೂರು ಅಧ್ಯಕ್ಷರಾದ ಜಯಂತ್ ಶೆಟ್ಟಿ ಕಂಬಳತಡ್ಡ , ಶ್ರೀ ಕೃಷ್ಣ ಯುವಕ ಮಂಡಲ ಕಂಬಳತಡ್ಡ ಅಧ್ಯಕ್ಷರಾದ ಸಂತೋಷ್ ಸುವರ್ಣ ಮೇರ್ಲ , ವರಮಹಾಲಕ್ಷ್ಮೀ ಸೇವಾ ಸಮಿತಿಯ ಅಧ್ಯಕ್ಷರಾದ ಭವ್ಯ ಆರ್ ಶೆಟ್ಟಿ ಮೇರ್ಲ , ಲೋಕೇಶ್ ರೈ ಮೇರ್ಲ, ಧನುಷ್ ಪೂಜಾರಿ ಹೊಸಮನೆ, ಕಾರ್ತಿಕ್ ಸುವರ್ಣ ಮೇರ್ಲ ಇವರ ತಂದೆ ತಾಯಿ ಹಾಗೂ ಕುಟುಂಬಸ್ಥರು, ಊರ ಸಮಸ್ಥ ಭಕ್ತಾಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.