Saturday, November 16, 2024
ಸುದ್ದಿ

ಕುಕ್ಕೇ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಮತ್ತೆ ಹತ್ತಿಕೊಂಡ ಅಂಗಡಿ ವಿವಾದ ; ದೇವಸ್ಥಾನ ಹಾಕಿದ್ದ ಬೇಲಿ ಮುರಿದು ಪ್ರವೇಶಿಸಿ, ಲಕ್ಷ್ಮಿ ಸುಬ್ರಹ್ಮಣ್ಯ ತಂಡದಿಂದ ಅಂಗಡಿ ಪುನರ್ ನಿರ್ಮಾಣಕ್ಕೆ ಯತ್ನ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ದೇವಸ್ಥಾನದ ಜಾಗದಲ್ಲಿ ಅನಧಿಕೃತವಾಗಿ ದಲಿತ ಮುಖಂಡೆ ಲಕ್ಷ್ಮಿ ಸುಬ್ರಹ್ಮಣ್ಯರವರು ಹಾಕಿದ್ದ ಅಂಗಡಿಯನ್ನು 2 ದಿನದ ಹಿಂದೆ ದೇವಸ್ಥಾನದವರು ತೆರವು ಮಾಡಿದ್ದು, ಆ ಜಾಗಕ್ಕೆ ದೇವಸ್ಥಾನ ದವರು ಬೇಲಿ ಹಾಕಿದ್ದರು. ಆ ಬೇಲಿಯನ್ನು ಇಂದು ಮುರಿದ ಲಕ್ಷ್ಮಿ ಸುಬ್ರಹ್ಮಣ್ಯ ಮತ್ತು ಅವರ ಬೆಂಬಲಿಗರು ಅಂಗಡಿ ನಿರ್ಮಾಣ ಅದೇ ಸ್ಥಳದಲ್ಲಿ ಮಾಡುತ್ತಿದ್ದಾರೆ.

ದೇವಸ್ಥಾನದವರು ಹಾಕಿದ್ದ ಬೇಲಿಯನ್ನು ಮುರಿದು ಅನಧಿಕೃತವಾಗಿ ಪ್ರವೇಶ ಮಾಡಿದ ಲಕ್ಷ್ಮಿ ಮತ್ತು ತಂಡದ ವರು ಅಂಗಡಿ ನಿರ್ಮಾಣ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ದೇವಸ್ಥಾನ ದವರು ಪೋಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ದಲಿತೆಯಾಗಿದ್ದು ಮನೆಯಲ್ಲಿ ಅನಾರೋಗ್ಯ ದಿಂದ ಬಳಲುತ್ತಿರುವ ಅಕ್ಕ ಇದ್ದಾಳೆ. ಅವಳ ಆರೈಕೆಗೆ ಹಣ ಬೇಕಿದ್ದು ಇಲ್ಲಿ ವ್ಯಾಪಾರ ನಡೆಸಲು ಅಂಗಡಿ ಹಾಕುತಿದ್ದೇನೆ. ಇಂದು ಸುಳ್ಯ ದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿದ್ದ ಮಾಜಿ ಉಸ್ತುವಾರಿ ಸಚಿರಾದ ರಮಾನಾಥ ರೈಯವರೂ ಸೇರಿದಂತೆ ಎಲ್ಲರೂ ನನಗೆ ಬೆಂಬಲ ಸೂಚಿಸಿದ್ದಾರೆ. ವ್ಯವಸ್ಥಾಪನಾ ಸಮಿತಿ ಸದಸ್ಯರು ಅವರು ಸಭೆಯಲ್ಲಿ ಇದ್ದು ಬೆಂಬಲಿಸಿದ್ದಾರೆ. ನನ್ನ ಕುಟುಂಬದ ಹೊಟ್ಟೆ ಪಾಡಿಗೆ ಬೇರೆ ಕೆಲಸವಿಲ್ಲದೆ ಇಲ್ಲಿ ಅಂಗಡಿ ಹಾಕುತ್ತಿದ್ದೇನೆ. ಇಲ್ಲಿ ಸಾಕಷ್ಟು ಅನಧಿಕೃತ ಅಂಗಡಿ ಇದೆ. ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಲಕ್ಷ್ಮಿಯವರು ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ಶಿವರಾಂ ರೈ ಹಾಗು ಇನ್ನಿಬ್ಬರು ನನಗೆ ವಿರೋಧಿಸುತ್ತಿದ್ದಾರೆ. ಎಂದು ಹೇಳಿದರು ಲಕ್ಷ್ಮಿಯವರು ಆರೋಪಿಸಿದರು,

ಪೊಲೀಸರ ಆಗಮನ : ಅಂಗಡಿ ನಿರ್ಮಾಣ ಸ್ಥಳಕ್ಕೆ ಎ.ಎಸ್.ಐ ಚಂದಪ್ಪ ನೇತೃತ್ವದಲ್ಲಿ ಪೊಲೀಸರು ಬಂದು ಅಂಗಡಿ ನಿರ್ಮಾಣ ನಿಲ್ಲಿಸುವಂತೆ ಹೇಳಿದರು. ಬಳಿಕ ಲಕ್ಷ್ಮೀ ಅವರನ್ನು ಕರೆದು ದೇವಸ್ಥಾನದ ಜಾಗದಲ್ಲಿ ನೀವು ಅನಧಿಕೃತವಾಗಿ ಅಂಗಡಿ ನಿರ್ಮಿಸುತ್ತಿದ್ದೀರೆಂದು ದೂರು ಬಂದಿದೆ ಆಗ ಲಕ್ಷ್ಮೀ ಅವರು ಚಂದಪ್ಪರಲ್ಲಿ ತಮ್ಮ ಅಳಲು ತೋಡಿಕೊಂಡರಲ್ಲದೆ ಸುಳ್ಯದ ಸಭೆಯಲ್ಲಿ ಆಗಿರುವ ಮಾತುಕತೆಯನ್ನು ವಿವರಿಸಿದರು. ನಿಮ್ಮ ಮಾತಿಗೆ ಗೌರವ ಕೊಟ್ಟು ಇವತ್ತು ಕೆಲಸ ನಿಲ್ಲಿಸುತ್ತೇನೆ. ತನಗಾದ ಅನ್ಯಾಯದ ಬಗ್ಗೆ ದೂರು ಕೂಡುತ್ತೇನೆ ನ್ಯಾಯ ದೊರಕಿಸಿಕೊಡ ಬೇಕೆಂದು ಹೇಳಿ ತಮ್ಮ ಜತೆ ಬಂದ ಬೆಂಬಲಿಗರೊಂದಿಗೆ ಸ್ಥಳದಿಂದ ತೆರಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಸುಜಯಕೃಷ್ಣ ಬ್ಲಾಕ್ ಕೊಂಗ್ರೆಸ್ ಮಹಿಳಾ ಘಟಕ ಸುಳ್ಯ ಉ. ಅಧ್ಯಕ್ಷ ಹಾಗು ಆಶ್ರಯ ಸಮಿತಿ ಸದಸ್ಯೆಯವರು ಮಹಿಳೆಗೆ ಅನ್ಯಾಯ ಆಗುತ್ತಿದೆ ನಾವೆಲ್ಲರೂ ಇದ್ದೇವೆ ನ್ಯಾಯ ಸಿಗುವವರೆಗೆ ಹೋರಾಟಮಾಡುತ್ತೇವೆ ಎಂದರು, ಶ್ರೀಮತಿ ಪ್ರವೀಣ ರೈ,ಬ್ಲಾಕ್ ಕೊಂಗ್ರೆಸ್ ಮಹಿಳಾ ಘಟಕ ಸುಳ್ಯ ಕಾರ್ಯದರ್ಶಿ,ಯವರು ಇಲ್ಲಿ ಬೇರೆ ಕಡೆಯಿಂದ ಬಂದವರಿಗೆ ಅಂಗಡಿ ಮಾಡಲು ಅವಕಾಶ ಕೊಡುತ್ತಾರೆ, ಇಲ್ಲೇ ಹುಟ್ಟಿಬೆಳೆದ ಮಹಿಳೆಗೆ ಅನ್ಯಾಯವಾಗುತ್ತಿದೆ ನಾವೆಲ್ಲ ಇದ್ದೇವೆ ಹೊರಟ ಮಾಡುತ್ತೇವೆ ಎಂದರು.