Saturday, November 16, 2024
ಸುದ್ದಿ

ಋಣಮುಕ್ತ ಅರ್ಜಿಯ ಕುರಿತು ಪುತ್ತೂರು ಸಹಾಯಕ ಆಯುಕ್ತರು ಮಾತುಗಳು ಸಂಶಯಾಸ್ಪದ – ಜೆಡಿಎಸ್ ಮುಖಂಡ ಇಬ್ರಾಹಿಂ ಗೋಳಿಕಟ್ಟೆ ಆರೋಪ – ಕಹಳೆ ನ್ಯೂಸ್

ಪುತ್ತೂರು : ಕರ್ಣಾಟಕ ಸಮ್ಮಿಶ್ರ ಸರಕಾರದ ವತಿಯಿಂದ ಋಣಮುಕ್ತ ಕಾಯಿದೆಯು ಜಾರಿಗೊಂಡ ನಂತರ ಸಾಲಬಾರದಿಂದ ಮುಕ್ತವಾಗಲು ಸಾಲಗಾರರು ಆಶಾಭಾವನೆಯಿಂದ ದಿನವೊಂದರ ಸುಮಾರು 500 ರರಷ್ಟು ಅರ್ಜಿಗಳನ್ನು ಪುತ್ತೂರು ತಾಲೂಕೊಂದರಲ್ಲೇ ಸರಕಾರಕ್ಕೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಈಗ ಕಚೇರಿಗೆ ಬಂದು ಸೇರಿದ ಆರು ಸಾವಿರಕ್ಕಿಂತಲೂ ಮೇಲ್ಪಟ್ಟು ಈ ಅರ್ಜಿಗಳು ಪರಿಶೀಲಿಸದೆಯೇ ಪುತ್ತೂರು ಉಪವಿಬಾಗದ ಸಾಯಕ ಆಯುಕ್ತರು ಶೇಕಡಾ 90 ಕ್ಕೂ ಅದಿಕ ಅರ್ಜಿಗಳು ತಿರಸ್ಕೃತಗೊಳ್ಳಲಿದೆಯೆಂಬ ಪ್ರಕಟಣೆ ಹೊರಡಿಸಿರುವುದು ಸರಿಯಲ್ಲ.ಇದರಿಂದ ಫಲಾನುಭವಿಗಳ ಮನಸ್ಸನ್ನು ದುರ್ಬಲಗೊಳಿಸುವುದು ಮಾತ್ರವಲ್ಲ ಸರಕಾರದಿಂದ ದೊರಕಿದ ಸವಲತ್ತನ್ನು ಪಡೆಯುವುದರಿಂದ ನಿರುತ್ತೇಜನಗೊಳಿಸುವುದು ಕೂಡಾ ಕಂಡು ಬರುತ್ತಿದೆ.

ಇನ್ನೂ ಬಹಳಷ್ಟು ದಿನ ಕಾಲವಕಾಶ ಇರುವಾಗ ಸಾದ್ಯವಾದಷ್ಟರ ಮಟ್ಟಿಗೆ ಈ ಜನಪರ ಯೋಜನೆಯನ್ನು ಪ್ರತಿ ಹಳ್ಳಿಗಳಿಗೂ ತಲುಪಿಸುವ ಯೋಜನೆಯನ್ನು ಅದಿಕಾರಿಗಳು ಕೈಗೊಳ್ಳಬೇಕಿತ್ತು.ಮಾತ್ರವಲ್ಲ ತಾಲೂಕು ಕಛೇರಿಯಲ್ಲಿಯೇ ಸಿಬ್ಬಂದಿಯನ್ನು ನೇಮಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸವನ್ನು ಮಾಡಬಹುದಾಗಿತ್ತು.ಇದರ ಹೊರತು ಅರ್ಜಿಯನ್ನು ಸ್ವೀಕರಿಸಿ ಅವದಿಗೆ ಮೊದಲೇ ಫಲಾನುಭವಿಗಳನ್ನು ನಿರುತ್ಸಾಹಗೊಳಿಸುವ ಆವೇಶದ ಹೇಳಿಕೆಯು ಸರಿಯಾದ ಕ್ರಮವಲ್ಲ ಎಂದು ಪುತ್ತೂರು ನಾಗರಿಕ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಅಬಿಪ್ರಾಯ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು