ಬೆಳ್ಳಾರೆಯಲ್ಲಿ “ಗ್ರಾಮೀಣ ಮತ್ತು ಬುಡಕಟ್ಟು ಜನರ ಆರೋಗ್ಯ ಮತ್ತು ಜೀವನ ಶೈಲಿ’ ವಿಶೇಷ ಕಾರ್ಯಕ್ರಮ -ಕಹಳೆ ನ್ಯೂಸ್
ಬೆಳ್ಳಾರೆ : ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಪೆರುವಾಜೆ ಇಲ್ಲಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಗ್ರಾಮೀಣ ಮತ್ತು ಬುಡಕಟ್ಟು ಜನರ ಆರೋಗ್ಯ ಮತ್ತು ಜೀವನ ಶೈಲಿ” ಎಂಬ ವಿಷಯದ ಕುರಿತಾಗಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಪ್ರಸ್ತಾವಿಕ ಮಾತನಾಡಿದ ಸ್ನಾತಕ ಸಮಾಜ ಕಾರ್ಯ ವಿಭಾಗದ ಸಂಯೋಜಕರಾದ ಗೋವಿಂದರಾಜ್ ಕೆ. ಓ ಬುಡಕಟ್ಟು ಜನರು ಯಾವುದೇ ಪೇಟೆ ಪ್ರದೇಶಗಳಲ್ಲಿ ಕಂಡುಬರುವ ವ್ಯಕ್ತಿಗಳಲ್ಲ, ಅವರು ತಮ್ಮ ವಿಭಿನ್ನ ಜೀವನ ಶೈಲಿಯೊಂದಿಗೆ ಬದುಕುವವರು, ಅವರು ಎಂದಿಗೂ ನಮ್ಮ ಆಧುನಿಕ ಶೈಲಿಯೊಂದಿಗೆ ರಾಜಿಯಗುವ ಸಂದರ್ಭ ಬಹಳ ಕಡಿಮೆ ಎಂದರು.
ಇನ್ನು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದ ಸುಳ್ಯ ಸಂಚಾರಿ ಗಿರಿಜನ ಆರೋಗ್ಯ ಘಟಕ ಇದರ ವೈದ್ಯಾಧಿಕಾರಿಯಾಗಿರುವ ಡಾ. ನಂದಕುಮಾರ್ ಮಾತನಾಡಿ, ಬುಡಕಟ್ಟು ಮತ್ತು ಗ್ರಾಮೀಣ ಜನರ ಜೀವನ ವಿಧಾನಗಳು, ಅವರ ಆಹಾರ ಪದ್ಧತಿ ಮತ್ತು ಅವರ ಆರೋಗ್ಯ ಸ್ಧಿತಿ-ಗತಿಗಳ ಹಾಗೂ ಬುಡಕಟ್ಟು ಜನರ ಆರೋಗ್ಯ ಸೇವೆಯ ತನ್ನ ಅನುಭವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಸುಪ್ರೀಯ.ಪಿ.ಆರ್ ಗ್ರಾಮೀಣ ಮತ್ತು ಬುಡಕಟ್ಟು ಜನರ ಜೀವನ ಶೈಲಿಯ ಕುರಿತಾಗಿ ಕಲಿಯುವುದು ಬಹಳಷ್ಟಿದೆ. ನಾವು ಇಂದು ಅವರರೊಂದಿಗೆ ಕೆಲಸ ನಿರ್ವಹಿಸಿದ ವ್ಯಕ್ತಿಯ ಕುರಿತಾಗಿ ತಿಳಿದಿದ್ದೇವೆ, ಯಾವುದೇ ಯೋಜನೆಗಳು ಕುರಿತು ಮಾಹಿತಿ ತಿಳಿಯುವುದಕ್ಕಿಂತ, ಅ ವಿಷಯದಲ್ಲಿ ಸಹಚರ್ಯ ಹೊಂದಿದವರ ಅನುಭವ ತಿಳಿದುಕೊಳ್ಳುವುದು ತುಂಬಾನೇ ಪರಿಣಾಮಕಾರಿಯಾಗಿರುತ್ತದೆ ಎಂದರು. ವೇದಿಕೆಯಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷರಾದ ಲವೀಶ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ವೃಂದ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಧುಶ್ರೀ ಪ್ರಾರ್ಥಿಸಿ, ಲಕ್ಷ್ಮಣ ಸ್ವಾಗತಿಸಿ, ವೀಣಾ ವಂದಿಸಿದರು ಮತ್ತು ಜಿತೇಶ್ ಕಾರ್ಯಕ್ರಮ ನಿರೂಪಿಸಿದರು.