ಕೋಮು ಗಲಭೆ ಪ್ರಕರಣ ; ಮುಸ್ಲಿಂ ಸಂಘಟನೆಯ ಕಾರ್ಯಕರ್ತರ ಮೇಲಿನ ಕೇಸ್ ವಾಪಾಸ್ | ಮುಸ್ಲಿಮರಿಗೆ ಕ್ಲೀನ್ ಚೀಟ್ ಭಾಗ್ಯ – ಕಹಳೆ ನ್ಯೂಸ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮತ್ತೆ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ. ಸಿದ್ದರಾಮಯ್ಯ ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಮಾಡುವ ಕೆಲಸ ನಡೆಯುತ್ತಿದೆ ಎಂಬ ಆರೋಪವೊಂದು ಇದೀಗ ಕೇಳಿ ಬಂದಿದೆ.
ಕೋಮು ಗಲಭೆಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಅಭಿಯೋಜನೆಯಿಂದ ಕೇಸ್‍ಗಳನ್ನು ವಾಪಸ್ ಪಡೆಯಲು ಕೋರಿ ಪತ್ರ ಬರೆಯಲಾಗಿದೆ.
5 ವರ್ಷಗಳಲ್ಲಿ 20 ಜಿಲ್ಲೆ, ಬೆಳಗಾವಿ ಮತ್ತು ಮಂಗಳೂರು ಕಮಿಷನರೇಟ್‍ಗಳಲ್ಲಿ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಅಭಿಯೋಜನೆಯನ್ನು ಕೋರಿದೆ. ಒಟ್ಟಿನಲ್ಲಿ ಕೋಮು ಭಾವನೆ ಬಿತ್ತಿದ್ದಾರೆ ಎಂದು ಸರ್ಕಾರ, ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಕೇಸ್ ಹಾಕುತ್ತೆ. ಆದ್ರೆ ಇತ್ತ ಕೋಮುಗಲಭೆಗಳಲ್ಲಿ ಭಾಗಿಯಾಗಿರೋ ಮುಸ್ಲಿಮರ ಮೇಲಿನ ಕೇಸ್ ವಾಪಸ್ ಪಡಿತಾರೆ ಅನ್ನೋ ಆರೋಪ ಕೇಳಿಬಂದಿದೆ.
ವರದಿ : ಕಹಳೆ ನ್ಯೂಸ್