Recent Posts

Monday, April 7, 2025
ಸುದ್ದಿ

ಫಾರಂ ಮಾಲ್ ಹಲ್ಲೆ ಪ್ರಕರಣ ; ಆಸ್ಪತ್ರೆಗೆ ಭೇಟಿ ನೀಡಿ ಹಿಂದೂ ಯುವಕನಿಗೆ ಧರ್ಯ ತುಂಬಿದ ಶರಣ್ ಪಂಪ್ವೆಲ್ – ಕಹಳೆ ನ್ಯೂಸ್

ಮಂಗಳೂರು : ಫಾರಂ ಫೀಝಮಾಲ್ ನಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಕೇಸು ದಾಖಲುಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವೀಯಾದ ಡಾ. ಹರ್ಷಾ ನೇತೃತ್ವದ ಮಂಗಳೂರು ಪೋಲೀಸರಿಗೆ ವಿಶ್ವಹಿಂದೂ ಪರಿಷದ್ ಬಜರಂಗದಳ ಅಭಿನಂದಿಸಿದೆ ಮತ್ತು ಇನ್ನಷ್ಟು ಆರೋಪಿಗಳು ಹಲ್ಲೆಯಲ್ಲಿ ಇದ್ದು ಅವರೆಲ್ಲರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲ್ಲೆಗೊಳಗಾದ ಆಮಾಯಕ ಹುಡುಗನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ನೀಡಲಾಗುತ್ತಿದ್ದು, ಯುವಕ ಸ್ಥಿತಿ ಗಂಭೀರವಾಗಿದೆ‌. ಆಸ್ಪತ್ರೆಗೆ ಭೇಟಿ ನೀಡಿದ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ವೆಲ್ ಹಲ್ಲೆಗೆ ಒಳಗಾದ ಯುವಕನಿಗೆ ಮತ್ತು ಮನೆಯವರಿಗೆ ನೈತಿಕ ಧೈರ್ಯ ತುಂಬಿದ್ದಾರೆ ಅಲ್ಲದೆ, ಇಂತಹ ಘಟನೆ ಇನ್ನು ಮರುಕಳಿಸದಂತೆ ಆ ಮಾಲ್ ನವರು ಹಾಗೆ ಪೋಲೀಸ್ ಇಲಾಖೆ ನಿಘಾ ವಹಿಸಬೇಕು ಮತ್ತು ಇಂತಹಾ ಜಿಹಾದಿಗಳ ನೈತಿಕಪೋಲೀಸ್ ಗಿರಿಗೆ ಇತಿಶ್ರೀಹಾಡಬೇಕು ಎಂದು ಇದೇ ಸಂಧರ್ಭದಲ್ಲಿ ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ