Friday, September 20, 2024
ರಾಜಕೀಯ

ಮಂಗಳೂರಿನ ಫಾರಂ ಮಾಲ್ ನಲ್ಲಿ ಯುವತಿಯರನ್ನು ಚುಡಾಯಿಸಿ, ಪ್ರಶ್ನಿಸಿದ ಹಿಂದೂ ಯುವನ ಮೇಲೆ ಹಲ್ಲೆ ನಡೆಸಿದ ಮತಾಂಧರನ್ನು ಮಟ್ಟ ಹಾಕಲು ಸರ್ಕಾರ ಬದ್ಧವಾಗಿದೆ ; ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ – ಕಹಳೆ ನ್ಯೂಸ್

ಮಂಗಳೂರು, ಸೆ 26 : ಯುವತಿಯೋರ್ವಳನ್ನು ಚುಡಾಯಿಸುತ್ತಿದ್ದ ಗುಂಪನ್ನು ತಡೆದು ಪ್ರಶ್ನಿಸಿದ ಯುವಕನಿಗೆ ತಂಡವೊಂದು ಹಲ್ಲೆಗೈದ ಘಟನೆ ನಿಜಕ್ಕೂ ಖಂಡನೀಯ. ಈ ಸಂಬಂಧ ಈಗಾಗಲೇ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಯುವತಿಯರನ್ನು ಚುಡಾಯಿಸುವ ಹಾಗೂ ಪ್ರಶ್ನಿಸಿದಾಗ ಹಲ್ಲೆ‌ ನಡೆಸುವ ಪ್ರಕರಣಗಳನ್ನು ಸಹಿಸಲು ಬಿಜೆಪಿ ಸರ್ಕಾರದಲ್ಲಿ ಅವಕಾಶವಿಲ್ಲ. ಮತಾಂಧರನ್ನು ಮಟ್ಟ ಹಾಕಲು ಸರ್ಕಾರ ಬದ್ದವಾಗಿದೆ ಎಂದು ಆಶ್ವಾಸನೆ ನೀಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಟ್ವೀಟ್ ಹೇಳಿದ್ದಾರೆ.

ಜಾಹೀರಾತು

 

ಬುಧವಾರ ನಗರ ಪಾಂಡೇಶ್ವರದ ಮಾಲ್ ನಲ್ಲಿ ಯುವಕನಿಗೆ ತಂಡವೊಂದು ಹಲ್ಲೆಗೈದ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಓರ್ವ ಅಪ್ರಾಪ್ತ ವಯಸ್ಸಿನ ಬಾಲಕನ ಸಹಿತ ಮೂವರನ್ನು ಬಂಧಿಸಿದ್ದರು. ಬಂಟ್ವಾಳದ ಮಂಜುನಾಥ್ ಹಲ್ಲೆಗೊಳಗಾದ ಯುವಕನಾಗಿದ್ದ. ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು.

ಘಟನೆಯ ವಿವರ:

ಫಾರಂ ಮಾಲ್‌ನಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ತಂಡ ಯುವತಿಯರನ್ನು ಚುಡಾಯಿಸುತ್ತಿದ್ದು, ಮಂಜುನಾಥ್ ಈ ಬಗ್ಗೆ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ‘ನಮ್ಮನ್ನು ಪ್ರಶ್ನಿಸಲು ನೀನ್ಯಾರು’ ಎಂದು ವಿದ್ಯಾರ್ಥಿಗಳ ಗುಂಪು ಮಂಜುನಾಥ್ ಅವರನ್ನು ಮರು ಪ್ರಶ್ನಿಸಿದ್ದಾರೆ. ಆಗ ‘ಇದು ಹಿಂದು ರಾಷ್ಟ್ರ’ ಎಂದು ಮಂಜುನಾಥ್ ಹೇಳಿದ್ದಾರೆ. ಇದರಿಂದ ಇನ್ನಷ್ಟು ಕೆರಳಿದ ವಿದ್ಯಾರ್ಥಿಗಳು ಇನ್ನೊಮ್ಮೆ ಹೇಳುವಂತೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಮುಂದುವರಿದಾಗ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿ ವೈರಲ್ ಮಾಡಿದ್ದರು.

 

ಮಂಜುನಾಥ್ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯದಲ್ಲಿ ತೊಡಗಿದ್ದ ಎಲ್ಲರ ವಿವರ ಪೊಲೀಸರಿಗೆ ಲಭ್ಯವಾಗಿದ್ದು, ಕೆಲವರು ತಲೆಮರೆಸಿಕೊಂಡಿದ್ದರು. ಈ ನಡುವೆ ಆರೋಪಿಗಳಾದ ಮೊಹಿಯುದ್ದೀನ್ ಸಫ್ವಾನ್, ಅಬ್ದುಲ್ ರಹೀಮ್ ಎಂಬುವರನ್ನು ಕಾನೂನಿನೊಡನೆ ಸಂಘರ್ಷಕ್ಕಿಳಿದವನ ಸಹಿತ ಮೂವರನ್ನು ಬಂಧಿಸಿದ್ದರು.