Recent Posts

Sunday, January 19, 2025
ಸುದ್ದಿ

ಅಯೋಧ್ಯೆ ವಿವಾದ ಅ.18ರ ಬಳಿಕ ವಾದ-ಪ್ರತಿವಾದಕ್ಕೆ ಒಂದು ದಿನವೂ ಅವಕಾಶವಿಲ್ಲ; ಸುಪ್ರೀಂಕೋರ್ಟ್-ಕಹಳೆ ನ್ಯೂಸ್

ನವದೆಹಲಿ: 32ನೇ ದಿನವಾದ ಇಂದು ಅಯೋಧ್ಯೆ ರಾಮ ಜನ್ಮಭೂಮಿ ವಿವಾದಿತ 2.77 ಎಕರೆ ಜಾಗದ ಮಾಲೀಕತ್ವದ ಕುರಿತು ವಾದ ಮಂಡನೆ ಮಾಡಿದ್ದಾರೆ. ಈ ಕುರಿತ ಎಲ್ಲಾ ವಾದ ಹಾಗೂ ಪ್ರತಿವಾದಗಳನ್ನು ಅಕ್ಟೋಬರ್ 14ರೊಳಗಾಗಿ ಪೂರ್ಣಗೊಳಿಸಲು ನ್ಯಾಯಾಲಯ ನಿರ್ಧರಿಸಿದ್ದು, ಇನ್ನುಳಿದ ನಾಲ್ಕು ದಿನಗಳಲ್ಲಿ ಅಂತಿಮ ತೀರ್ಪು ನೀಡಲು ನ್ಯಾಯಾಲಯ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ನ್ಯಾಯಾಲಯಕ್ಕೆ ಹಾಜರಾದ ಸುನ್ನಿ ವಕ್ಫ್ ಮಂಡಳಿಯ ಪರ ವಕೀಲ ರಜೀವ್ ಧವನ್ ಅವರು, ವಾದ ಹಾಗೂ ಪ್ರತಿವಾದಗಳಿಗೆ ದಿನದಲ್ಲಿ 1 ಗಂಟೆ ಹೆಚ್ಚಾಗಿ ನೀಡುವಂತೆ ಹಾಗೂ ಶನಿವಾರ ಕೂಡ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಲಯ, ವಾದ ಹಾಗೂ ಪ್ರತಿವಾದ ಕೇಳಲು ಇನ್ನು 10 ದಿನಗಳು ಬಾಕಿಯಿದ್ದು. ಅ.18ರ ಬಳಿಕ ಒಂದು ದಿನ ಕೂಡ ವಾದ ಹಾಗೂ ಪ್ರತಿವಾದಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು