Recent Posts

Sunday, January 19, 2025
ಸುದ್ದಿ

ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಸಕ್ತ ವರ್ಷದಲ್ಲಿ 57ಕೋಟಿ 78ಲಕ್ಷ ವ್ಯವಹಾರ – ಕಹಳೆ ನ್ಯೂಸ್

ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಸಕ್ತ ವರ್ಷದಲ್ಲಿ 57ಕೋಟಿ 78ಲಕ್ಷ ವ್ಯವಹಾರ ನಡೆಸಿದ್ದು 19ಲಕ್ಷದ 18ಸಾವಿರ ಲಾಭ ಗಳಿಸಿದೆ. ಸದ್ಯ ಸದಸ್ಯರಿಗೆ ಶೇಕಡಾ 10% ಡಿವಿಡೆಂಡ್ ನೀಡಲಾಗುತ್ತಿದೆ. ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ ಪೇರಡ್ಕ ಈ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಒಟ್ಟು 1520 ಸದಸ್ಯರನ್ನು ಹೊಂದಿದ್ದು 6 ಕೋಟಿ 67ಲಕ್ಷ ಠೇವಣಿ ಹೊಂದಿದೆ, 8 ಕೋಟಿ 36 ಲಕ್ಷ ಸಾಲ ನೀಡಿದೆ ಎಂದರು. ಮಾಣಿಲದಲ್ಲಿ ಶಾಖೆಯನ್ನು ಹೊಂದಿದ್ದು ಕಂಪ್ಯೂಟರಿಕೃತ ಸಂಘವಾಗಿ ಬೆಳೆದಿದೆ. ರೈತರ ಅನುಕೂಲಕ್ಕಾಗಿ ರಸಗೊಬ್ಬರ, ಕೀಟನಾಶಕ, ಪಿಯುಸಿ ಪೈಪ್ ಮತ್ತು ಬಿಡಿಭಾಗ, ಪಡಿತರ ವಿತರಣೆಯನ್ನು ಸಂಘದ ಸದಸ್ಯರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿರ್ದೇಶಕರಾದ ಕೆ ಪ್ರಭಾಕರ ಶೆಟ್ಟಿ ,ಪ್ರಕಾಶ್ಚಂದ್ರ ಶೆಟ್ಟಿ ,ಜಿ.ಗೀತಾನಂದ ಶೆಟ್ಟಿ,ರಾಮ ನಾಯ್ಕ , ಕೃಷ್ಣರಾಜೇಶ್ವರಿ, ಉದಯಕುಮಾರ್, ಲತಾ, ರಾಜೇಶ್ ಕುಮಾರ್.ಬಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಧನಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಘದ ನಿರ್ದೇಶಕರಾದ ಗೀತಾನಂದ ಶೆಟ್ಟಿ ಅವರು ಸ್ವಾಗತಿಸಿ ಪ್ರಭಾಕರ ಶೆಟ್ಟಿ ಅವರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.