Saturday, November 23, 2024
ಸುದ್ದಿ

ಬೆಳ್ಳಾರೆ ಸ.ಪ್ರ.ದ.ಕಾಲೇಜಿನಲ್ಲಿ “ಮಹಿಳಾ ಆರೋಗ್ಯ ಮತ್ತು ಪೌಷ್ಠಿಕ ಆಹಾರ” ಮಾಹಿತಿ ಕಾರ್ಯಕ್ರಮ.. – ಕಹಳೆ ನ್ಯೂಸ್

ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಪೆರುವಾಜೆ ಇಲ್ಲಿನ ಮಹಿಳಾ ವೇದಿಕೆಯ ವತಿಯಿಂದ “ಮಹಿಳೆಯರ ಆರೋಗ್ಯ ಮತ್ತು ಪೌಷ್ಠಿಕ ಆಹಾರ “ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕರಾಗಿರುವ ಡಾ. ಸುಪ್ರಿಯಾ ಪಿ. ಆರ್ ಮಾತನಾಡಿ ಇಂದು ಮಕ್ಕಳಿಗೆ ಪೌಷ್ಠಿಕ ಆಹಾರಗಳ ಜ್ಞಾನವೇ ಕಡಿಮೆಯಾಗಿದೆ, ರಸ್ತೆ ಬದಿಯಲ್ಲಿ ದೊರಕುವ ವಿಷಕಾರಿ ಆಹಾರಗಳೆಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ ಎಂದರು. ಹೆಣ್ಣು ಮಕ್ಕಳು ಸೌಂದರ್ಯ ಪ್ರಜ್ಞೆಯಿಂದ ಕಡಿಮೆ ಆಹಾರ ಸೇವಿಸುತ್ತಾರೆ. ಆದರೆ ಆರೋಗ್ಯಕ್ಕಿಂತ ದೊಡ್ಡ ಸೌಂದರ್ಯವಿಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪನ್ಮೂಲ ವ್ಯಕ್ತಿಯಾಗಿದ್ದ ಸುಳ್ಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾಗಿರುವ ಶ್ರೀ ಮತಿ ಶೈಲಜ ಮಾತನಾಡಿ ವಿದ್ಯಾರ್ಥಿನಿಯರಿಗೆ ಈ ಕಾಲೇಜು ಅವಧಿಯ ವಯಸ್ಸಿನಲ್ಲಿ ಪೌಷ್ಠಿಕ ಆಹಾರದ ಸೇವನೆ ಅತಿ ಅವಶ್ಯಕ,ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಪೌಷ್ಠಿಕಯುಕ್ತ ಧಾನ್ಯ ಕಾಳುಗಳನ್ನು ಹೆಚ್ಚಾಗಿ ಬಳಸಿಕೊಂಡು ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳುವ ಕಡೆಗೆ ಹೆಚ್ಚು ಗಮನ ಹರಿಸಬೇಕು, ಪೌಷ್ಠಿಕ ಆಹಾರಗಳ ಬಳಕೆಯ ವಿಧಾನ ಮತ್ತು ಪೌಷ್ಠಿಕಾಂಶ ಇರುವ ಧಾನ್ಯ, ಮತ್ತು ಅವುಗಳಲ್ಲಿ ಪೌಷ್ಠಿಕಾಂಶ ಪ್ರಮಾಣದ ಬಗ್ಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾಂಶುಪಾಲರಾದ ಪ್ರೊ ರಾಘವ ಎನ್ ಅಧ್ಯಕ್ಷತೆ ವಹಿಸಿದ್ದರು, ಕಾಲೇಜಿನ ವಿದ್ಯಾರ್ಥಿ ಮಹಿಳಾ ವೇದಿಕೆಯ ಅಧ್ಯಕ್ಷರಾಗಿರುವ ಮೋಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.. ಕಾಲೇಜಿನ ಮಹಿಳಾ ಉಪನ್ಯಾಸಕ ವೃಂದ ಮತ್ತು ಎಲ್ಲ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶ್ವೇತಾ ಮತ್ತು ಯಶಸ್ವಿನಿ ಪ್ರಾರ್ಥಿಸಿ, ಮೋಕ್ಷ ಸ್ವಾಗತಿಸಿ, ಮಧುರ ವಂದಿಸಿದರು, ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.