Sunday, January 19, 2025
ಕ್ರೀಡೆಸುದ್ದಿ

ನಾಳೆಯಿಂದ ಐಪಿಎಲ್ ಹರಾಜು | ಸ್ಟೋಕ್ಸ್, ಅಶ್ವಿನ್‍ಗೆ ಭಾರೀ ಬೇಡಿಕೆ ನಿರೀಕ್ಷೆ – ಕಹಳೆ ನ್ಯೂಸ್

 

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ನಾಳೆಯಿಂದ ಎರಡು ದಿನಗಳ ಕಾಲ ಉದ್ಯಾನಗರಿ ಬೆಂಗಳೂರಿನಲ್ಲಿ ನಡೆಯಲಿದ್ದು, ವಿಶ್ವದ ಅಗ್ರಮಾನ್ಯ ಆಟಗಾರರಿಗೆ ಭಾರೀ ಬೇಡಿಕೆಯ ನಿರೀಕ್ಷೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಗ್ಲೆಂಡ್‌‌ನ ಆಲ್‌ರೌಂಡರ್‌ ಬೆನ್ ಸ್ಟೋಕ್ಸ್ , ಟೀಂ ಇಂಡಿಯಾ ತಂಡದ ಪ್ರಮುಖ ಆಟಗಾರ ಆರ್.ಅಶ್ವಿನ್, ಆರಂಭಿಕ ಆಟಗಾರ ಶಿಖರ್ ಧವನ್‌‌, ಮಿಚೆಲ್ ಸ್ಟ್ರಾಕ್, ಕ್ರಿಸ್‍ಗೇಲ್ ಮತ್ತು ಡ್ವೈನ್‌ ಬ್ರಾವೊ ಸೇರಿದಂತೆ ಪ್ರಮುಖ ಆಟಗಾರರಿಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹರಾಜು ಪ್ರಕ್ರಿಯೆಯಲ್ಲಿ 361 ಭಾರತೀಯರು ಸೇರಿದಂತೆ 578 ಆಟಗಾರರು ಈ ವರ್ಷ ಹರಾಜಿಗೆ ಒಳಪಡಲಿದ್ದಾರೆ. 16 ಪ್ರಮುಖ ಆಟಗಾರರು ಅತ್ಯುನ್ನತ ಸ್ಥಾನದ ಬೇಡಿಕೆಯಲ್ಲಿದ್ದು, ಎರಡು ಕೋಟಿ ರೂ.ಗಳ ಮೂಲ ಬೆಲೆಯಿಂದ ಹರಾಜು ಆಗುವ ನಿರೀಕ್ಷೆಯಿದೆ.

ಅಲ್‍ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಕಳೆದ ವರ್ಷ ಐಪಿಎಲ್‍ನಲ್ಲಿ 14.5 ಕೋಟಿ ರೂ.ಗಳ ದಾಖಲೆ ಮೊತ್ತಕ್ಕೆ ಹರಾಜಾಗಿದ್ದರು. ಅದು ಈ ವರ್ಷವೂ ಪುನರಾವರ್ತನೆಯಾಗುವ ಸಾಧ್ಯತೆಯಿದೆ. ಭಾರತದ ಸ್ಟಾರ್ ಬೌಲರ್ ಆರ್.ಅಶ್ವಿನ್ ಅವರಿಗೂ ಐಪಿಎಲ್ ಹರಾಜಿನಲ್ಲಿ ಭರ್ಜರಿ ಬೇಡಿಕೆಯಿದೆ. ಉತ್ತಮ ಫಾರ್ಮ್‍ನಲ್ಲಿರುವ ಭರವಸೆಯ ಬಾಟ್ಸ್‌‌‌ಮನ್‌ ಅಜಿಂಕ್ಯ ರಹಾನೆ ಟಿ-20 ಮತ್ತು ಏಕದಿನ ಪಂದ್ಯಗಳಲ್ಲಿ ಫಾರ್ಮ್‍ನಲ್ಲಿದ್ದು, ಪ್ರಸ್ತುತ ಐಪಿಎಲ್‍ನಲ್ಲಿ ಡಿಮ್ಯಾಂಡ್ ಇದೆ.

ಭಾರತದ ಮತ್ತೊಬ್ಬ ಆಲ್‍ರೌಂಡರ್ ಕೇದಾರ್ ಜಾಧವ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಉಳಿಯುವ ಸಾಧ್ಯತೆಯಿದೆ. ಸ್ಪಿನ್ನರ್‌‌ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರಿಗೂ ಭಾರೀ ಬೇಡಿಕೆ ಬರುವ ಸಾಧ್ಯತೆ ಇದೆ. ಉಳಿದಂತೆ ಕನ್ನಡಿಗ ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ವಿಕೆಟ್‌‌ ಕೀಪರ್‌‌ ದಿನೇಶ್ ಕಾರ್ತಿಕ್ ಹೆಸರು ಮುಂಚೂಣಿಯಲ್ಲಿದೆ.

ವರದಿ : ಕಹಳೆ ನ್ಯೂಸ್

Leave a Response