Monday, January 20, 2025
ಸುದ್ದಿ

ತುಳುನಾಡಿನ ಹೊಸೊಬ್ಬರ ತಂಡವೊಂದು ಶೀಘ್ರದಲ್ಲೇ `ಪಿರ್ಕಿಲು ಬತ್ತೆರ್’ ಅನ್ನುವ ತುಳು ಹಾಸ್ಯಮಯ ಚಿತ್ರದೊಂದಿಗೆ ಬರಲಿದ್ದಾರೆ – ಕಹಳೆ ನ್ಯೂಸ್

ತುಳು ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಚಿತ್ರಗಳು ಬರುತ್ತಿವೆ. ಹಾಗೆ ಹೊಸ ಪ್ರತಿಭೆಗಳು ಮುನ್ನೆಲೆಗೆ ಬರುತ್ತಿದ್ದಾರೆ. ಇದೀಗ ತುಳುನಾಡಿನ ಹೊಸೊಬ್ಬರ ತಂಡವೊಂದು ಕರಾವಳಿ ಸಿನಿಮಾಸ್ ಬ್ಯಾನರ್ ಅಡಿ ಶೀಘ್ರದಲ್ಲೇ `ಪಿರ್ಕಿಲು ಬತ್ತೆರ್’ ಅನ್ನುವ ತುಳು ಹಾಸ್ಯಮಯ ಚಿತ್ರದೊಂದಿಗೆ ಬರಲಿದ್ದಾರೆ.

ಮುಖ್ಯ ಭೂಮಿಕೆಯಲ್ಲಿ ತುಳುನಾಡ ಹಾಸ್ಯರತ್ನ ಅರವಿಂದ ಬೋಳಾರ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಜಯಂತ್ ಆರ್ಯ ಅವರ ನಿರ್ದೆಶನವಿದ್ದು, ಸತೀಶ್ ಅವರು ನಿರ್ಮಾಪಕರು. ಸಿನಿಮಾಕ್ಕೆ ವಿ ಮನೋಹರ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದ ವಿವಿಧ ಪಾತ್ರಗಳಿಗಾಗಿ ಮಂಗಳೂರು ಮತ್ತು ಪುತ್ತೂರಿನಲ್ಲಿ ಚಿತ್ರ ತಂಡ ಆಡೀಶನ್ ನಡೆಸಿದೆ. ಇದರ ಜವಾಬ್ದಾರಿಯನ್ನು ವರ್ಧನ್, ಲತಾ ಗೌಡ ಮತ್ತು ತಂಡದವರು ವಹಿಸಿಕೊಂಡಿದ್ದರು. ಬರುವ ತಿಂಗಳಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು