Saturday, September 21, 2024
ಸುದ್ದಿ

ನಾಡಹಬ್ಬ ದಸರೆಗೆ ಸಕಲ ಸಿದ್ದತೆ; ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ ಅರಮನೆ ನಗರಿ – ಕಹಳೆ ನ್ಯೂಸ್

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ ಶುರುವಾಗಿದೆ. ಸಾಂಸ್ಕೃತಿಕ ನಗರಿ, ಅರಮನೆ ನಗರರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಜಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಇದೇ ಭಾನುವಾರ ಮೈಸೂರು ದಸರಾಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರು ಉಸ್ತುವಾರಿ ಸಚಿವರಾಗಿರುವ ವಿ.ಸೋಮಣ್ಣ ದಸರಾ ಸಿದ್ಧತೆ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಇವತ್ತು ನಾಳೆ ದಸರೆಯ ಎಲ್ಲ ಕಾರ್ಯಕ್ರಮಗಳ ಸಿದ್ದತೆ ಮುಗಿಯಲಿದೆ. ಸೆ.29ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಅಂದೇ ಹಲವು ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ ಎಂದು ಹೇಳಿದರು.

ಜಾಹೀರಾತು

ನಾಡಹಬ್ಬ ದಸರಾಗೆ ಡಿಸಿಎಂಗಳು ಸೇರಿ ಸಚಿವರು ಬರಲಿದ್ದಾರೆ. ಇತರೆ ಪಕ್ಷದ ಪ್ರಮುಖರನ್ನು ದಸರೆಗೆ ಆಹ್ವಾನ ನೀಡಲಾಗಿದೆ. ಪಂಜಿನ ಕವಾಯತಿಗೆ ಕೇಂದ್ರದ ಸಚಿವರು ಬರಲಿದ್ದಾರೆ ಎಂದು ತಿಳಿಸಿದರು. ಅ. 01ಕ್ಕೆ ಪಿ.ವಿ ಸಿಂಧು ಅವರು ಯುವ ದಸರಾ ಉದ್ಘಾಟನೆ ಮಾಡಲಿದ್ದಾರೆ. ಯುವ ದಸರಾದ ಪಟ್ಟಿ ನಾಳೆ ಫೈನಲ್ ಆಗಲಿದೆ. ಇವತ್ತು ಆರು ಕಾರ್ಯಕ್ರಮಗಳ ಪಟ್ಟಿ ಫೈನಲ್ ಆಗಿದೆ ಎಂದರು.

ಮೈಸೂರು ನಗರದಾದ್ಯಂತ 100ಕಿ.ಮೀ ವರೆಗೆ ದೀಪಾಲಂಕಾರ ವ್ಯವಸ್ಥೆ ಆಗಿದೆ. ಶೇ.90ರಷ್ಟು ದೀಪಾಲಂಕಾರ ವ್ಯವಸ್ಥೆ ಆಗಿದ್ದು, ನಾಳೆಯೊಳಗೆ ಪೂರ್ಣ ಆಗಲಿದೆ. ದಸರಾವನ್ನು ಜನರ ದಸರಾ ಮಾಡಬೇಕೆಂದು ಅಚ್ಚುಕಟ್ಟಾಗಿ ಮಾಡಿದ್ದೇವೆ ಎಂದು ಹೇಳಿದರು. 2019ರ ದಸರಾವನ್ನು ತಾಯಿ ಚಾಮುಂಡೇಶ್ವರಿಗೆ ಅರ್ಪಣೆ ಮಾಡೋಣ. ಎಲ್ಲಾ ಇಲಾಖೆಯ ಅಧಿಕಾರಿಗಳು ಕೆಲಸ ಚೆನ್ನಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

3ನೇ ಹಂತದ ಫಿರಂಗಿ ತಾಲೀಮು:
ಶಸಸ್ತ್ರ ಮೀಸಲು ಪಡೆ ಸಿಬ್ಬಂದಿಯಿಂದ ಇಂದು ಮೂರನೇ ಹಂತದ ಫಿರಂಗಿ ತಾಲೀಮು ನಡೆಸಲಾಯಿತು. ಆನೆಗಳಿಗೆ ಹಾಗೂ ಕುದುರೆಗಳಿಗೆ ಭಾರಿ ಶಬ್ದವನ್ನು ಪರಿಚಯಿಸುವ ತಾಲೀಮು ಇದಾಗಿದೆ. ಮೈಸೂರಿನ ಅಂಬಾ ವಿಲಾಸ ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಫಿರಂಗಿ ತಾಲೀಮು ಮಾಡಿಸಲಾಯಿತು. ನಗರ ಪೊಲೀಸ್ ಕಮಿಷನರ್, ಟಿ. ಬಾಲಕೃಷ್ಣ ನೇತೃತ್ವದಲ್ಲಿ ಫಿರಂಗಿ ತಾಲೀಮು ನಡೆಯಿತು. 7 ಫಿರಂಗಿ ಗಾಡಿಗಳ ಮೂಲಕ 3 ಸುತ್ತುಗಳಲ್ಲಿ ಒಟ್ಟು 21 ಕುಶಾಲತೋಪು ಸಿಡಿಸಿ ಪೂರ್ವಾಭ್ಯಾಸ ಮಾಡಲಾಯಿತು.

ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ 12 ಆನೆಗಳು ಮತ್ತು 25 ಕುದುರೆಗಳಿಗೆ ಫಿರಂಗಿ ಶಬ್ದ ಪರಿಚಯ ಮಾಡಿಸಲಾಯಿತು. ಬೆದರುವ ಲಕ್ಷಣಗಳಿರುವ 6 ಆನೆಗಳ ಕಾಲುಗಳನ್ನು ಸರಪಣಿಯಿಂದ ಕಟ್ಟಿ ಮುಂಜಾಗ್ರತೆ ವಹಿಸಲಾಗಿತ್ತು. ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿಗಳಿಂದ ಫಿರಂಗಿ ತಾಲೀಮು ನಡೆಯಿತು.