Sunday, January 19, 2025
ಸುದ್ದಿ

ದಿವ್ಯಪ್ರಭಾ ಚಿಲ್ತಡ್ಕ ನೇತೃತ್ವದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಪುತ್ತೂರಿನಲ್ಲಿ ಅಸ್ತಿತ್ವಕ್ಕೆ ಬರಲಿದೆ ‘ ಪ್ರಿಯದರ್ಶಿನಿ ಮಹಿಳಾ ಸಹಕಾರಿ ಸಂಘ ನಿ. ‘ – ಕಹಳೆ ನ್ಯೂಸ್

 

ಪುತ್ತೂರು : ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಭಾವಿ ಅಭ್ಯರ್ಥಿ ಎನ್ನಲಾಗುತ್ತಿರುವ ಗೌಡ ಸಮುದಾಯದ ಪ್ರಬಲ ನಾಯಕಿ ಡಾ. ದಿವ್ಯಪ್ರಭಾ ಚಿಲ್ತಡ್ಕ ನೇತೃತ್ವದಲ್ಲಿ ಮಹಿಳಾ ಸಹಕಾರಿ ಸಂಘಕ್ಕೆ ಪ್ರಯದರ್ಶಿನಿ ಮಹಿಳಾ ಸಹಕಾರಿ ಸಂಘ ನಿ. ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಬರುವ ಫೆಬ್ರವರಿ 28 ರ ಆದಿತ್ಯವಾರ ಪುತ್ತೂರಿನ ರಾಮಸೌಧದಲ್ಲಿ ನೂತನ ಕಛೇರಿ ಮತ್ತು ಪ್ರಿಯದರ್ಶಿನಿ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮವು ತೆಂಕಿಲದ ಒಕ್ಕಲಿಗ ಸಭಾಭವನದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದಿ ಚುಂಚನಗಿರಿ ಶಾಖಾ ಮಠದ ಪರಮಪೂಜ್ಯ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ದೀಪಬೆಳಗಿಸಿ ಆಶೀರ್ವಚನ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈಯವರು ಕಛೇರಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಆಡಳಿತ ಕಛೇರಿ ಮತ್ತು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ. ಕಾದರ್ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಭೋಜನ ನಂತರ 1.30 ರಿಂದ ಪ್ರವಚನ ಕಾರ್ಯಕ್ರಮ. ಮಧ್ಯಾಹ್ನ 2.00 ಗಂಟೆ ನಂತರ ವಿನೂತನ ಹಾಸ್ಯ ಕಾರ್ಯಕ್ರಮ ಸುಧಾ ಬರಗೂರು ತಂಡದಿಂದ ” ನಗೆ ಹಬ್ಬ ” ಕಾರ್ಯಕ್ರಮ ನಡೆಯಲಿದೆ.

ವರದಿ : ಕಹಳೆ ನ್ಯೂಸ್

Leave a Response