Friday, September 20, 2024
ಸುದ್ದಿ

ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿರುವ ಒಡಿಯೂರು ಶ್ರೀ ಸಂಸ್ಥಾನದ ‘ಶ್ರೀಹನುಮಗಂಗಾ ಪುಷ್ಕರಿಣಿ’ ; ಅಕ್ಟೋಬರ 2ರಂದು ಶ್ರೀ ಲಲಿತಾ ಪಂಚಮಿ ಮಹೋತ್ಸವ-ಶ್ರೀ ಚಂಡಿಕಾ ಮಹಾಯಾಗ – ಕಹಳೆ ನ್ಯೂಸ್

ಒಡಿಯೂರು : ಶ್ರೀಗಳವರ ದಿವ್ಯ ಕಲ್ಪನಾಶಕ್ತಿಯ ಅನಾವರಣವಾಗಿ ಶ್ರೀ ಸಂಸ್ಥಾನದಲ್ಲಿ ನಿರ್ಮಾಣಗೊಂಡಿರುವ ‘ಶ್ರೀಹನುಮಗಂಗಾ ಪುಷ್ಕರಿಣಿ’ ಅಕ್ಟೋಬರ 2, ಶ್ರೀ ಲಲಿತಾ ಪಂಚಮಿ ಮಹೋತ್ಸವದಂದು ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ.

ಒಡಿಯೂರು ಶ್ರೀ ದತ್ತಾಂಜನೇಯ ದೇಗುಲದ ವಿಶೇಷ ಆಕರ್ಷಣೆಯಾಗಿರುವ ಶ್ರೀಹನುಮಗಂಗಾ ಪುಷ್ಕರಿಣಿ ಕಲಾತ್ಮಕವಾಗಿ ಮೂಡಿಬಂದಿದೆ. ನಿತ್ಯ ಹರಿದ್ವರ್ಣದ ರಮಣೀಯ ವನಸಿರಿ ಕಲೆಂಜಿಮಲೆಯ ಹಿನ್ನಲೆಯಲ್ಲಿ ಅಪ್ಯಾಯಮಾನವಾದ ಕಲ್ಪವೃಕ್ಷಗಳ ಮಧ್ಯದ ಪುಷ್ಕರಿಣಿಯ ಉತ್ತರಭಾಗದಲ್ಲಿ ನಿರ್ಮಿಸಿದ ವಿಶಿಷ್ಟ ಶಿಲ್ಪಕೃತಿಯಲ್ಲಿ ಶ್ರೀ ದತ್ತಗುರು ಮತ್ತು ಶ್ರೀ ಆಂಜನೇಯನ ಬಿಂಬ ದಿವ್ಯ ತೇಜಸ್ಸಿನಿಂದ ಆಕರ್ಷಿಸುತ್ತಿದೆ. ಸಮೀಪದಲ್ಲಿರುವ ಕಾಮಧೇನು, ಹನುಮ, ನವಿಲು ಮೂರ್ತಿಗಳಿಗೆ ಪ್ರಾಕೃತಿಕವಾದ ಆಕರ್ಷಣೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸುಂದರ ಶಿಲ್ಪರಚನೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಪೂರ್ವದಲ್ಲಿ ಹನುಮ, ಪಶ್ಚಿಮದಲ್ಲಿ ಗರುಡ ಆಕೃತಿ, ಮಧ್ಯದಲ್ಲಿ ಗಣಪತಿ ಮೂಡಿದೆ.

ಜಾಹೀರಾತು

ಶ್ರೀ ಸಂಸ್ಥಾನದಲ್ಲಿ ಸುಂದರವಾಗಿ ನಿರ್ಮಿಸಿ ‘ನಿತ್ಯಾನಂದ ಗುಹೆಯಲ್ಲಿಯ ಪುಟ್ಟ ಜಲಾಶಯದಲ್ಲಿ ಆಗ್ನೇಯ ಭಾಗದಲ್ಲಿರುವ ‘ಹನುಮಗಂಗೆ’ ಒರತೆ ನೇರವಾಗಿ ಶ್ರೀಹನುಮಗಂಗಾ ಪುಷ್ಕರಿಣಿಗೆ ಗೋಮುಖದ ಮೂಲಕ ಸೇರುತ್ತದೆ.

ಶ್ರೀ ಲಲಿತಾ ಪಂಚಮಿ ಮಹೋತ್ಸವ-ಶ್ರೀ ಚಂಡಿಕಾ ಮಹಾಯಾಗ :

ಅ.2ರಂದು ಶ್ರೀ ಸಂಸ್ಥಾನದಲ್ಲಿ ವಿವಿಧ ಧಾರ್ಮಿಕ – ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಲಲಿತಾ ಪಂಚಮಿ ಮಹೋತ್ಸವ ನಡೆಯಲಿದೆ. ಲೋಕಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾ ಮಹಾಯಾಗವು ಜರಗಲಿದ್ದು, ಪೂರ್ವಾಹ್ಣ ದೀಪಾರಾಧನೆ, 9.30ಕ್ಕೆ ಶ್ರೀ ಚಂಡಿಕಾ ಮಹಾಯಾಗ ಆರಂಭಗೊಳ್ಳಲಿದೆ. ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮ 10.00ಗಂಟೆಗೆ ನಡೆಯಲಿದ್ದು ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿರುವರು. ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಚಿಕ್ಕಮಗಳೂರು ಬಸವನಹಳ್ಳಿ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಶ್ರೀಮತಿ ನಂದಿನಿ ಶೆಟ್ಟಿ, ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ವಿದುಷಿ ಸಾವಿತ್ರಿ ಈಶ್ವರ ಭಟ್ ಅಮೈ, ಚಿತ್ರನಟ, ರಂಗಭೂಮಿ ಕಲಾವಿದ ಶ್ರೀ ಕಾಸರಗೋಡು ಚಿನ್ನಾ, ಯಕ್ಷಗಾನ ಹಾಸ್ಯ ಕಲಾವಿದ ಶ್ರೀ ಸೀತಾರಾಮಕುಮಾರ್ ಕಟೀಲು, ತುಳು ನಾಟಕ ರಚನೆಗಾರ, ನಿರ್ದೇಶಕ, ನಿರ್ಮಾಪಕ ಶ್ರೀ ಕೃಷ್ಣ ಜಿ. ಮಂಜೇಶ್ವರ, ಚಿತ್ರಕಲಾ ಶಿಕ್ಷಕ ಶ್ರೀ ತಾರಾನಾಥ ಕೈರಂಗಳ, ಅಬ್ಬಕ್ಕ ಟಿ.ವಿ.ಯ ಆಡಳಿತ ನಿರ್ದೇಶಕ ಶ್ರೀ ಶಶಿಧರ ಪೊಯ್ಯತ್ತಬೈಲ್ ಇವರಿಗೆ ಶ್ರಿ ಗುರುದೇವಾನುಗ್ರಹ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಮಧ್ಯಾಹ್ನ ಶ್ರೀ ಚಂಡಿಕಾ ಮಹಾಯಾಗದ ಪುರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದ್ದು, 2.00 ಗಂಟೆಗೆ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಚಂದ್ರಾವಳಿ ವಿಲಾಸ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಸಂಜೆ 6.00 ಗಂಟೆಗೆ ಸಾರ್ವಜನಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಲಿದೆ.