ವಿವೇಕಾನಂದ ಕಾಲೇಜಿನ 50ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ; ಬದುಕನ್ನು ಧೈರ್ಯಗೆಡದೆ ಅನುಭವಿಸಬೇಕು: ಪ್ರೊ. ಆರ್. ವೇದವ್ಯಾಸ – ಕಹಳೆ ನ್ಯೂಸ್
ಪುತ್ತೂರು : ಜೀವನ ಎಣಿಸಿದಂತಲ್ಲ, ಏರು-ಪೇರು, ಕಷ್ಟ-ಸುಖ ಇದ್ದೇ ಇರುತ್ತದೆ. ದೊರಕಿರುವ ಬದುಕನ್ನು ಧೈರ್ಯಗೆಡದೆ ಅನುಭವಿಸಬೇಕು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಆರ್. ವೇದವ್ಯಾಸ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಐಕ್ಯುಎಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ 50ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ಸಮಾಜದಲ್ಲಿ ಆರ್ಥಿಕ, ನೈತಿಕ, ಸಾಮಾಜಿಕ ಧ್ವಂದ್ವಗಳಿರುತ್ತದೆ. ಎನ್‍ಎಸ್‍ಎಸ್ ತನ್ನೊಳಗಿರುವ ಮೌಲ್ಯ, ನೈತಿಕತೆಯನ್ನು ತಿಳಿಸುವುದರ ಮೂಲಕ ಯಾವುದೇ ಸಮಯದಲ್ಲಿ ಪರೋಪಕಾರವನ್ನು ಗ್ರಹಿಸಿಕೊಳ್ಳುತ್ತದೆ. ಅದಲ್ಲದೇ ಉತ್ತಮ ರೀತಿಯಿಂದ ಉನ್ನತ ಮಟ್ಟಕ್ಕೆ ತಲುಪಲು ಎನ್‍ಎಸ್‍ಎಸ್ ಸಹಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಒಂದು ಕಾರ್ಯವನ್ನು ಸತತ ಪ್ರಯತ್ನಗಳಿಂದ ಸದೃಢÀವಾಗಿ ಯಶಸ್ವಿಗೊಳಿಸಬಹುದು. ನಾವು ಹಣ ಗಳಿಸಿದರೆ ಮಾತ್ರ ದೊಡ್ಡ ವ್ಯಕ್ತಿಗಳಲ್ಲ. ಒಂದು ಸಣ್ಣ ಸಹಕಾರ, ಕರುಣೆ, ಪ್ರೀತಿ ತೋರಿಸದರೆ ಅದು ವ್ಯಕ್ತಿಯ ಪಡೆದುಕೊಳ್ಳುವ ಉತ್ತಮ ಮೌಲ್ಯ. ಪರರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಉಪಕಾರವು ದೊಡ್ಡ ರೀತಿಯದ್ದಾಗಿರಬೇಕಾಗಿಲ್ಲ. ಆದರೆ ಅದು ಮನಸ್ಸಿನಿಂದ ಬಂದಿರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಎನ್‍ಎಸ್‍ಎಸ್ ಸಂಯೋಜಕಿ ವಿದ್ಯಾ ಕೆ.ಎಸ್. ಉಪಸ್ಥಿತರಿದ್ದರು. ಸ್ವಯಂ ಸೇವಕಿ ಚೈತ್ರಾ, ಹರ್ಷಿತಾ, ವಿಶಾಖ ಭಾವೈಕ್ಯ ಗೀತೆ ಹಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಸಂಯೋಜಕ ಶ್ರೀನಾಥ್ ಸ್ವಾಗತಿಸಿದರು. ಸಂಘದ ನಾಯಕ ಆಕಾಶ್ ಎನ್. ಶೆಟ್ಟಿ ವಂದಿಸಿ, ಚರಣ್ ಕಾರ್ಯಕ್ರಮ ನಿರೂಪಿಸಿದರು.