ಸುಬ್ರಹ್ಮಣ್ಯ: ಧಾರ್ಮಿಕ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಕಾರ್ಯ ನಿರ್ವಾಹಣಧಿಕಾರಿ ರವೀಂದ್ರ ಎಂ.ಎಚ್ ಅವರಿಗೆ ನಂಜನಗೂಡು ಶ್ರೀ ಕಂಠೇಶ್ವರ ದೇಗುಲಕ್ಕೆ ವರ್ಗಾವಣೆಗೊಳಿಸಲಾಗಿದ್ದು ಕುಕ್ಕೆ ದೇಗುಲದ ಅಧಿಕಾರವನ್ನು ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ವಹಿಸಲಾಗಿದೆ. ಪುತ್ತೂರು ಎ.ಸಿ ಅವರು ರವಿವಾರದಿಂದ ಅಧಿಕಾರ ಸ್ವೀಕರಿಸಲಿದ್ದಾರೆ.
ವರ್ಗಾವಣೆ ಆಗಿರುವುದನ್ನು ಇ.ಒ ರವೀಂದ್ರ ಎಂ ಎಚ್ ಖಚಿತಗೊಳಿಸಿದ್ದು ರವಿವಾರದಂದು ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಅಧಿಕಾರ ಹಸ್ತಾಂತರಿಸಿ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಸುಬ್ರಹ್ಮಣ್ಯ ದೇಗುಲಕ್ಕೆ ದಾನಿಗಳು ಕೊಡಮಾಡುವ ಬ್ರಹ್ಮರಥ ಸೆ.30ರಂದು ಹೊರಟು ಅ.2 ಕ್ಕೆ ತಲುಪಲಿದೆ.ಈ ಹಿಂದೆ ಕಾಂಗ್ರೆಸ್ ಸರಕಾರ ನೇಮಿಸಿದ ಈಗಿನ ಆಡಳಿತ ಮಂಡಳಿ ಬ್ರಹ್ಮರಥ ಬರಮಾಡಿಕೊಳ್ಳಲು ಭರಪೂರ ಸಿದ್ಸತೆ ನಡೆಸುತ್ತಿದೆ.ಈ ನಡುವೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ.
ಈ ನಡುವೆ ದೇಗುಲದ ಸಿ.ಒ ಅವರನ್ನು ವರ್ಗಾಯಿಸಿ ಸಹಾಯಕ ಆಯುಕ್ತರಿಗೆ ದೇಗುಲದ ಅಧಿಕಾರ ವಹಿಸಿರುವುದು ಅಚ್ಚರಿ ಮೂಡಿಸಿದೆ. ಮುಂದಿನ ಅ.18ಕ್ಕೆ ಈಗಿನ ಆಡಳಿತ ಮಂಡಳಿ ಆಧಿಕಾರ ಮುಗಿಯಲಿದೆ.