ಪುತ್ತೂರು: ಕಾಲೇಜು ಕಾರಿಡಾರ್ ಎನ್ನುವುದು ನೆನಪುಗಳ ಗುಚ್ಛವಾಗಿದೆ. ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಗುಂಪಾಗಿ ಮಾತನಾಡುವ ಸ್ಥಳವಾದುದರಿಂದ ಇದು ಸಂಪರ್ಕವಾಹಿನಿಯಾಗಿದೆ. ಗೆಳೆಯರನ್ನು ಕಾಯುವ ಅದೇ ರೀತಿ ಪರೀಕ್ಷಾ ಸಮಯದಲ್ಲಿ ಉತ್ತರಗಳನ್ನು ನೀಡುವ ಜಾಗ ಕೂಡ ಆಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಕಾರಿಡಾರಿನ ಅನೇಕ ಅನುಭವಗಳು ಎಂದಿಗೂ ಮಾಸದಂತಹದು ಎಂದು ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಅಭಿಲಾಷ ಹೇಳಿದರು.
ಅವರು ಇಲ್ಲಿನ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸsುವ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಕಾರಿಡಾರ್ ಕಥೆಗಳು’ ಎಂಬ ವಿಷಯದ ಬಗ್ಗೆ ಗುರುವಾರ ಮಾತನಾಡಿದರು.
ಅಲ್ಲಿ ಹಲವು ಸ್ನೇಹದ ಕಥೆಗಳಿವೆ, ಜಗಳಗಳನ್ನು ನೋಡಿದ ಅನುಭವವಿದೆ. ತರಗತಿ ಫ್ರೀ ಇದ್ದಾಗ ಎಲ್ಲರ ಪ್ರಿಯವಾದ ಜಾಗ ಹಾಗಾಗಿ ಕಾಲೇಜಿನಲ್ಲಿರುವ ಬಸ್‍ಸ್ಟ್ಯಾಂಡ್ ಇದ್ದಂತೆ. ಆದ್ದರಿಂದ ನಮ್ಮ ಮನಸ್ಸಿನಂಗಳದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಉತ್ತಮ ಮಾತುಗಾರರಾಗಿ ತೃತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿ ಮೇಘನಾ ಆಯ್ಕೆಯಾದರು. ದ್ವಿತೀಯ ವರ್ಷದ ಪತ್ರಿಕೋದ್ಯಮ ತರಗತಿಯು ಉತ್ತಮ ಮಾತುಗಾರರ ತಂಡವಾಗಿ ಹೊರಹೊಮ್ಮಿತು. ವಿದ್ಯಾಥಿಗಳಾದ ಆಕರ್ಷ, ದಿಕ್ಷೀತಾ, ಚರಿಷ್ಮಾ, ಮೇಘನಾ, ಅರುಣ್ ಕುಮಾರ್, ಅನಘಾ, ತನುಶ್ರೀ, ಧನ್ಯ, ಸೌಜನ್ಯ, ಜಗದೀಶ್, ವನಿತಾ ಕಾರ್ತಿಕ್, ಮಮತಾ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಶ್ವೇತಾ ಹಾಗೂ ಅಕ್ಷತಾ ಅನುಭವಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಹಾಗೂ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ ರಾಮಕಿಶನ್ ಕೆ. ವಿ. ಉಪಸ್ಥಿತರಿದ್ದರು.
ತೃತೀಯ ವರ್ಷದ ವಿದ್ಯಾರ್ಥಿನಿ ಧನ್ಯಶ್ರೀ ಸ್ವಾಗತಿಸಿ, ಜಯಶ್ರೀ ವಂದಿಸಿದರು. ಸವಿತಾ ರೈ ಕಾರ್ಯಕ್ರಮ ನಿರೂಪಿಸಿದರು.