Wednesday, November 27, 2024
ರಾಜಕೀಯ

Breaking News : ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ; ಮತ್ತೆ 14 ದಿನ ಡಿಕೆಶಿಗೆ ಜೈಲೇ ಗತಿ..! – ಕಹಳೆ ನ್ಯೂಸ್

ಬೆಂಗಳೂರು[ಸೆ.30]: ಇಡಿ ಸುಳಿಯಲ್ಲಿ ಸಿಲುಕಿರುವ ಡಿ. ಕೆ. ಶಿವಕುಮಾರ್ ಹೊರ ಬರಲು ಹರ ಸಾಹಸ ನಡೆಸುತ್ತಿದ್ದಾರೆ. ಒಂದು ತಿಂಗಳಿನಿಂದ ವಿಚಾರಣೆ ಎದುರಿಸುತ್ತಿರುವ ಡಿಕೆಶಿ ಜಾಮೀನು ಸಿಗದೆ ತಿಹಾರ್ ಜೈಲು ಸೇರಿದ್ದಾರೆ. ಸದ್ಯ ಇನ್ನೂ 14 ದಿನ ಡಿಕೆಶಿ ಜೈಲಿನಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ಪದೇ ಪದೇ ಜಾಮೀನು ಅರ್ಜಿ ವಜಾ ಹಾಗೂ ವಿಚಾರಣೆ ಮುಂದೂಡಿಕೆಯಾದ ಪರಿಣಾಮ ಡಿಕೆಶಿ ತಿಹಾರ್ ಜೈಲು ಸೇರಿದ್ದಾರೆ. ಹೀಗಿರುವಾಗ ಇಂದು ಸೆ. 30ರಂದು ನಡೆಯಬೇಕಿದ್ದ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 14 ಮುಂದೂಡಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತ್ತ ಡಿಕೆಶಿ ತಿಹರ್ ಜೈಲಿನಲ್ಲಿದ್ದು ಸಂಕಷ್ಟವನ್ನೆದುರಿಸುತ್ತಿದ್ದರೆ, ಇತ್ತ ತಮ್ಮ ಡಿ. ಕೆ ಸುರೇಶ್ ಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ. ಡಿಕೆ ಕುಟುಂಬ ಈ ಸಂಕಷ್ಟಗಳ ಸರಮಾಲೆಯಿಂದ ಹೇಗೆ ಹೊರ ಬರುತ್ತೆ ಕಾದು ನೊಡಬೇಕಷ್ಟೆ.

ಜಾಹೀರಾತು
ಜಾಹೀರಾತು
ಜಾಹೀರಾತು