Wednesday, November 27, 2024
ಸುದ್ದಿ

ಫಿಲೋಮಿನಾ ಕಾಲೇಜಿನಲ್ಲಿ ‘ನ್ಯೂಟ್ರಿ-ಫಿಯಸ್ಟಾ 2019’ –ಕಹಳೆ ನ್ಯೂಸ್

ಪುತ್ತೂರು: ಪೌಷ್ಟಿಕಾಂಶಭರಿತ ಆಹಾರ ವಸ್ತುಗಳ ಸೇವನೆಯು ಮಾನವನ ಆರೋಗ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಆಹಾರ ಸಿದ್ಧಗೊಳ್ಳುವ ಮನೆಯು ಕುಟುಂಬದ ಸದಸ್ಯರಲ್ಲಿ ನೆಮ್ಮದಿ, ಸಂತೋಷವನ್ನು ನಿರ್ಮಿಸಬಲ್ಲುದು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಕಾಲೇಜಿನ ಪದವಿ ಸಮಾಜಕಾರ್ಯ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಸೆಪ್ಟಂಬರ್ 30ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಕಡಿಮೆ ವೆಚ್ಚದಲ್ಲಿ ಪೌಷ್ಟಿಕಾಂಶಭರಿತ ವೈವಿಧ್ಯಮಯ ಆಹಾರ ವಸ್ತುಗಳನ್ನು ತಯಾರಿ, ಪ್ರದರ್ಶನ ‘ನ್ಯೂಟ್ರಿ-ಫಿಯಸ್ಟಾ 2019’ ಎಂಬ ಆಹಾರ ಉತ್ಸವದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ನಾವು ಸೇವಿಸುವ ಆಹಾರದ ಗುಣಮಟ್ಟ ಮತ್ತು ಪ್ರಮಾಣ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿರ್ಧರಿಸುತ್ತದೆ. ಪ್ರತಿ ಮನೆಯಲ್ಲಿ ಆಹಾರ ಸೇವಿಸುವ ಕೊಠಡಿ ಮತ್ತು ಪ್ರಾರ್ಥನಾ ಕೊಠಡಿ ಮಹತ್ವಪೂರ್ಣವಾದುದು. ಇದು ಕುಟುಂಬದ ಎಲ್ಲಾ ಸದಸ್ಯರನ್ನು ಒಗ್ಗೂಡುವ ಸ್ಥಳ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸ್ವಪ್ರಯತ್ನ ಮತ್ತು ಶ್ರಮವನ್ನು ಬಳಸಿ ವೈವಿಧ್ಯಮಯ ಆಹಾರ ತಯಾರಿಸಿರುವುದು ಹೆಮ್ಮೆಯ ಸಂಗತಿ. ಇಂತಹ ಉತ್ಸವಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಹೆಚ್ಚುತ್ತದೆ. ಶುಚಿ ರುಚಿಯಾದ ಅಹಾರವನ್ನು ತಯಾರಿಸಿ, ಎಲ್ಲರಿಗೂ ಉಣ ಬಡಿಸಿರುವುದು ಸಂತೋಷದಾಯಕ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥ ಪೌಲ್ ಹೆರಾಲ್ಡ್ ಮಸ್ಕರೇನ್ಹಸ್ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಸಹ ಪ್ರಾಧ್ಯಾಪಕರಾದ ಜೋನ್ಸನ್ ಡೇವಿಡ್ ಸಿಕ್ವೇರಾ, ನ್ಯಾನ್ಸಿ ಲವಿನಾ ಪಿಂಟೊ ಮತ್ತು ದೀಪಿಕಾ ಸನಿಲ್ ಸಹಕರಿಸಿದರು.
ಈ ಉತ್ಸವದಲ್ಲಿ ಆಹಾರ ಪದಾರ್ಥಗಳಲ್ಲಿ ಇರಬೇಕಾದ ಪೌಷ್ಟಿಕಾಂಶಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ನಾನಾ ರೀತಿಯ ಮೊಳಕೆ ಬರಿಸಿದ ಧವಸ ಧಾನ್ಯಗಳು, ಹಣ್ಣು ಹಂಪಲುಗಳು, ಡ್ರೈ ಫ್ರುಟ್ಸ್, ತಿಮರೆ ಚಟ್ನಿ, ಪುದಿನ ಚಟ್ನಿ, ಹೆಸರು ಕಾಳು ಗೊಜ್ಜು, ಬಾಳೆ ದಿಂಡು ಪಲ್ಯ, ಕಡ್ಲೆ ಪಲ್ಯ, ಹೆಸರು ಪಲ್ಯ, ಕೋಸಂಬರಿ, ಪತ್ರೋಡೆ, ಕೇರಳದ ರಾಗಿ ಪುಟ್ಟು, ಅಕ್ಕಿ ಪುಟ್ಟು, ಸಮೋಸ, ಕ್ಯಾರೆಟ್ ಹಲುವ, ಕೇಸರಿ ಬಾತ್, ಘೀ ರೈಸ್ ಹಲುವ, ಲೆಮನ್ ರೈಸ್, ಪೂರಿ ಕಡ್ಲೆ, ಕೋಕನೆಟ್ ಬರ್ಫಿ, ಪುಳಿಯೋಗರೆ, ಸೇಮಿಗೆ ಪಾಯಸ, ಬೇಳೆ ಪಾಯಸ, ರವೆ ಉಂಡೆ, ಕ್ಯಾರೆಟ್ ಜ್ಯೂಸ್, ಆ್ಯಪಲ್ ಜ್ಯೂಸ್, ಲೆಮನ್ ಜ್ಯೂಸ್, ಕಲ್ಲಂಗಡಿ ಜ್ಯೂಸ್, ಫೈನಾಪಲ್ ಜ್ಯೂಸ್, ಕುಲ್ಕಿ ಶರಬತ್ತು, ಓರಿಯೊ ಶರಬತ್ತು, ಪಾನಕ, ಅರೇಬಿಯನ್ ಟೀ, ಪನ್ನೀರ್ ಸ್ಯಾಂಡ್‍ವಿಚ್, ಫ್ರೆಂಚ್ ಫ್ರೈಸ್, ಪೊಟೇಟೊ ಫ್ರೈ, ಮಲ್ನಾಡ್ ಪುಲಾವ್, ಮಿಲ್ಕ್ ಶೇಕ್, ಚಪಾತಿ ರೋಲ್, ಗ್ರೀನ್ ರೋಲ್, ರೆಡ್ ಬರ್ಗರ್, ಗೋಬಿ ಮುಂತಾದವುಗಳನ್ನು ಪ್ರದರ್ಶಿಸಿ, ಪ್ರಾಧ್ಯಾಪಕ ವೃಂದದವರಿಗೆ ಸವಿಯುಣಿಸಿದರು.