Tuesday, January 21, 2025
ಸುದ್ದಿ

ಮುಳಿಯದಲ್ಲಿ ಅಕ್ಟೋಬರ್ 2ರಿಂದ 8ರವರೆಗೆ “ಚಿನ್ನೋತ್ಸವದ ಸಂಭ್ರಮ” ; ಗಿರಿಗಿಟ್ ಸಿನಿಮಾ ಖ್ಯಾತಿಯ ನಾಯಕ ನಟಿ ಕು. ಶಿಲ್ಪಾ ಶೆಟ್ಟಿಯವರಿಂದ ಹೊಸ ರೋಸ್ ಗೋಲ್ಡ್ ಡಿಸೈನ್ ‘ ಅಪ್ಸರಾ ಕಲೆಕ್ಷನ್ ’ ಅನಾವರಣ – ಕಹಳೆ ನ್ಯೂಸ್

ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಬೆಳ್ತಂಗಡಿ ಶೋರೂಂನಲ್ಲಿ ಅಕ್ಟೋಬರ್ 2ರಿಂದ 8ರವರೆಗೆ ಚಿನ್ನೋತ್ಸವದ ಸಂಭ್ರಮ. ಈ ದಸರಾ ಸಂದರ್ಭದಲ್ಲಿ ಅಷ್ಟ ಲಕ್ಷ್ಮೀಯರ ಆಶೀರ್ವಾದ ಚಿನ್ನಕೊಳ್ಳುವವರ ಮೇಲೆ ಇರಲಿದೆ ಎಂಬ ನಂಬಿಕೆ ಜನರಲ್ಲಿದೆ.


ಪ್ರದರ್ಶನ ಮತ್ತು ಮಾರಾಟದ ಈ ಉತ್ಸವದಲ್ಲಿ “ಸೆಲೆಬರೇಟ್ ದ ಗೋಲ್ಡ್” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶಾಲಶ್ರೇಣಿಯ, ವಿನೂತನ ಬಗೆಯ ವಿವಿಧ ಆಭರಣಗಳ ಸಂಗ್ರಹ ಈ ಮುಳಿಯ ಚಿನ್ನೋತ್ಸವದ ವಿಶೇಷ ಎಂದು ಶ್ರೀ ಕೃಷ್ಣನಾರಾಯಣ ಮುಳಿಯರವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

1919 ಅಂದರೆ ಕಳೆದ 100 ವರ್ಷಗಳ ಹಿಂದೆ ಚಿನ್ನದ ಬೆಲೆ 1 ಗ್ರಾಂಗೆ ರೂ.1 ಅಂದಾಜು ಇತ್ತು. ಈಗ 2019ರಲ್ಲಿ ಬೆಲೆ ರೂ.3550/- ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಳಿಯ 75 ವರ್ಷಗಳ ಹಿಂದೆ ಆರಂಭವಾದಾಗ ಗ್ರಾಂ ಒಂದಕ್ಕೆ ರೂ.20/- ಇತ್ತು. ಹೀಗಾಗಿ ವರ್ಷದೊಳಗೆ ಮುಳಿಯ ಗ್ರಾಹಕರಿಗೆ ಲಾಭ-ಸಂತೋಷ ತಂದಿದೆ. “ಚಿನ್ನ ಎಂದೂ ಕೈ ಬಿಡುವುದಿಲ್ಲ” ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಕೇಶವ ಪ್ರಸಾದ್ ಮುಳಿಯರವರು ವಿವರಿಸಿದರು.

ಚಿನ್ನೋತ್ಸವದ ಸಂದರ್ಭದಲ್ಲಿ ಅಲಂಕಾರ ಮೆಹೆಂದಿ ಪ್ರತೀ ದಿನ ಚಿನ್ನದ ನಾಣ್ಯ ಗೆಲ್ಲುವ, ವಾಕ್ ಇನ್ ಆದವರಿಗೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶ. ಮುಂತಾದ ವಿಶೇಷ ಕಾರ್ಯಕ್ರಮದ “ಸಂಭ್ರಮದ ಸೆಲೆಬರೇಶನ್ ಇರಲಿದೆ ಎಂದು ಶಾಖಾ ಪ್ರಬಂಧಕ ನಾಮ್‍ದೇವ್ ಮಲ್ಯ ತಿಳಿಸಿದ್ದಾರೆ.

ಚಿನ್ನೋತ್ಸವ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಖ್ಯಾತಿಯ ಮೈಕ್ರೊ ಮೆಹೆಂದಿ ಡಿಸೈನರ್ ಶ್ರೀಮತಿ ಅನು ಉಪಾಧ್ಯ ಇವರು ದಿನಾಂಕ 2ರಂದು ಪುತ್ತೂರಿನಲ್ಲಿ ಹಾಗೂ 3ರಂದು ಬೆಳ್ತಂಗಡಿಯಲ್ಲಿ ಮುಳಿಯ ಶೋರೂಂನಲ್ಲಿ ನಿಮಗಾಗಿ ಲಭ್ಯರಿರುವರು.


ಹಾಗೆಯೇ ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರಾದ ಶ್ರೀ ಯತೀಶ್ ಆಚಾರ್ಯ ಇವರು ಚಿನ್ನೋತ್ಸವಕ್ಕೆ ಚಾಲನೆ ನೀಡಲಿದ್ದು, ಗಿರಿಗಿಟ್ ಸಿನಿಮಾ ಖ್ಯಾತಿಯ ನಾಯಕ ನಟಿಯೂ ಪುತ್ತೂರಿನವರೇ ಆದ ಕು. ಶಿಲ್ಪಾ ಶೆಟ್ಟಿ ಇವರನ್ನೂ ಸನ್ಮಾನಿಸಲಾಗುವುದು. ಕು. ಶಿಲ್ಪಾ ಶೆಟ್ಟಿ ಇವರು ಅಪ್ಸರಾ ಕಲೆಕ್ಷನ್ ಎಂಬ ಹೊಸ ರೋಸ್ ಗೋಲ್ಡ್ ಡಿಸೈನ್ ಗಳನ್ನು ಅನಾವರಣಗೊಳಿಸುವರು.


“ಈ ರೋಸ್ ಗೋಲ್ಡ್ ಡಿಸೈನ್‍ಗಳು, ಡ್ಯಾನ್ಸಿಂಗ್ ಸ್ಟೋನ್ ಆಭರಣಗಳು” ಇದೇ ಪ್ರಥಮ ಬಾರಿಗೆ ಇದು ಪುತ್ತೂರಿಗೆ ಮುಳಿಯ ಪರಿಚಯಿಸುತ್ತದೆ. 18 ಕ್ಯಾರೆಟ್ ನಲ್ಲಿ ಮಾಡಿರುವುದರಿಂದ ಪಾಕೆಟ್ ಪ್ರೆಂಡ್ಲೀ ಕೂಡಾ ಎಂದು ಬಣ್ಣಿಸಿದರು. ಶೋರೂಂಗೆ ಬಂದು ಇವುಗಳನ್ನು ನೋಡಿ ಮುಳಿಯ ಚಿನ್ನಾಭರಣಗಳೊಂದಿಗೆ ಸಂಭ್ರಮಿಸಿ ಎಂದು ಶ್ರೀ ಕೇಶವ ಪ್ರಸಾದ್ ಮುಳಿಯ ತಿಳಿಸಿದರು.

ನವರಾತ್ರಿಯ ಈ ಸಂದರ್ಭದಲ್ಲಿ 9 ವಿಧದ ರೋಸ್ ಗೋಲ್ಡ್ ಆಭರಣಗಳನ್ನು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಶಿಲ್ಪಾ ಶೆಟ್ಟಿ, ಸಿಂಚನಾ, ಸಿಲ್ವಿಯಾ ಡಿಸೋಜಾ, ಶ್ರೀಮತಿ ಕಲಾವತಿ, ಆಶಾ ಬೆಳ್ಳಾರೆ, ಉಷಾ ರವೀಂದ್ರ, ಅಶ್ವಿನಿ ಕೃಷ್ಣಮೂರ್ತಿ, ಕೃಷ್ಣವೇಣಿ ಇವರು ಅನಾವರಣಗೊಳಿಸುವರು.