Wednesday, January 22, 2025
ಸುದ್ದಿ

ಮಹಾತ್ಮ ಗಾಂಧಿಯವರ ಮಾನವೀಯತೆ, ಸರಳತೆ ನಮಗೆ ಸ್ಪೂರ್ತಿಧಾಯಕ ; ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ – ಕಹಳೆ ನ್ಯೂಸ್

ನವದೆಹಲಿ, ಅ 2 : ದೇಶಾದ್ಯಂತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನವನ್ನು ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಮಹಾತ್ಮ ಗಾಂಧಿಜಿಯವರ ತತ್ವ, ಮೌಲ್ಯಗಳನ್ನು ನೆನಪಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗಾಂಧೀಜಿಯವರನ್ನು ಸ್ಮರಿಸಿ, ಗಾಂಧೀಜಿಯವರ 150ನೇ ಜಯಂತಿಯವರ ನೀಡಿಸ ಅಂದೇಶಗಳು ಪ್ರಸ್ತುತವಾಗಿದ್ದು, ಅವರ ಮಾರ್ಗದರ್ಶನಗಳು ಎಂದೆದಿಗೂ ದಾರಿದೀಪ. ಅವರ ಸತ್ಯ. ಅಹಿಂಸೆ, ಸಹಕಾರ, ನೈತಿಕತೆ ಮತ್ತು ಸರಳತೆಯ ಮೌಲ್ಯಗಳನ್ನು, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ’ಪ್ರೀತಿಯ ಬಾಪುಗೆ ನಮನಗಳು. ಮಾನವೀಯತೆಗೆ ಗಾಂಧೀಜಿಯವರು ನೀಡಿದ ಅಮೂಲ್ಯ ಕೊಡುಗೆಗಳಿಗೆ ನಮ್ಮ ಕೃತಜ್ಞತೆಗಳು. ಅವರ ಕನಸನ್ನು ಸಾಕಾರಗೊಳಿಸಲು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಪಣತೊಟ್ಟು ಅದರ ಕಡೆಗೆ ಕೆಲಸ ಮಾಡೋಣ” ಎಂದು ಕರೆ ನೀಡಿದ್ದಾರೆ.

ಇಂದು ಬೆಳಗ್ಗೆ ದೆಹಲಿಯ ರಾಜಘಾಟ್ ನಲ್ಲಿರುವ ಮಹಾತ್ಮಾ ಗಾಂಧಿ ಸಮಾದಿಗೆ ತೆರಳಿದ ಮೋದಿ, ಬಾಪೂಜಿಯ 150ನೇ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಭಾರತೀಯ ಜನತಾ ಪಾರ್ಟಿಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಉಪಸ್ಥಿತರಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಸಹ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು.