Wednesday, January 22, 2025
ಸುದ್ದಿ

ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಪಿ. ಲಕ್ಷ್ಮೀನಾರಾಯಣ ಮೂಡಿತ್ತಾಯ ನಿಧನ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಪಿ. ಲಕ್ಷ್ಮೀನಾರಾಯಣ ಮೂಡಿತ್ತಾಯ ಇತ್ತೀಚೆಗೆ ನಿಧನರಾಗಿದ್ದಾರೆ. ಕಾಲೇಜಿನಲ್ಲಿ 1968ರಿಂದ 2003ರ ವರೆಗೆ ಸೇವೆಯನ್ನು ಸಲ್ಲಿಸಿ ನಿವೃತ್ತಿಪಡೆದಿದ್ದಾರೆ. 1946ರಂದು ಕಾಸರಗೋಡಿನ ಕಯ್ಯಾರು ಗ್ರಾಮದಲ್ಲಿ ಜನಿಸಿದ ಇವರು 1981ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ‘ದ್ರವ ಹರಳುಗಳು’ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಭೌತಶಾಸ್ತ್ರದ ಬೋಧನೆಯೊಂದಿಗೆ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ಇವರು ಪತ್ನಿ ಕೌಸಲ್ಯ, ಮಕ್ಕಳಾದ ಶ್ರೀ ವಿದ್ಯಾ, ಬಿ.ರವಿಶಂಕರ, ಕೆ.ಎಲ್. ಕಿಶೋರ್ ಅವರನ್ನು ಅಗಲಿದ್ದಾರೆ.


ಇವರ ಅಗಲುವಿಕೆಗೆ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು