Recent Posts

Sunday, January 19, 2025
ಸುದ್ದಿ

ತುಳು ಭಾಷೆ ಪುರಾತನ ಭಾಷೆ, ಸೂಕ್ತ ಶಾಸ್ತ್ರೀಯ ಸ್ಥಾನ ಮಾನ ಅಗತ್ಯವಿದೆ – ಒಡಿಯೂರು ಶ್ರೀ

 

ವಿಟ್ಲ:  ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಹೋರಾಟದ ಅಗತ್ಯವಿದೆ. ಧರ್ಮ ಸಂಸ್ಕೃತಿಯ ಜಾಗೃತಿಗಾಗಿ ತುಳುನಾಡ ಜಾತ್ರೆಯನ್ನು ನಡೆಸಲಾಗುತ್ತಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಧರ್ಮ ಚಾವಡಿಯಲ್ಲಿ ನಡೆದ ತುಳುನಾಡ್ದ ಜಾತ್ರೆ 2018 – ಶ್ರೀ ಒಡಿಯೂರು ರಥೋತ್ಸವ ಕಾರ್ಯಕ್ರಮದಲ್ಲಿ ತುಳುನಾಡ್ದ ನುಡಿ – ನಡಕೆ ಕರಿಪು, ಪರಿಪು, ಒರಿಪು – ಪದಿನೆಣ್ಮನೇ ಐಸಿರೊ ತುಳು ಸಾಹಿತ್ಯ ಸಮ್ಮೇಳನೊ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ ತುಳುವರ ಅಸಡ್ಡೆಯಿಂದ ತುಳುವಿಗೆ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ತಾಯಿ ಭಾಷೆಯನ್ನು ಕಲಿಯುವ, ಕಲಿಸುವ ಕಾರ್ಯ ಶಾಲೆಗಳಲ್ಲಿ ನಡೆಯಬೇಕು. 1840 ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ಕಲಿಯುತ್ತಿದ್ದಾರೆ  ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ತುಳುನಾಡಿನ ಮೂಲ ಸಂಸ್ಕೃತಿ ಬೆಳೆದಾಗ ಮಾತ್ರ ನಾವು ನಮ್ಮತನದೊಂದಿಗೆ ಬೆಳೆಯಲು ಸಾಧ್ಯ. ಆಧುನಿಕತೆಯ ಜೀವನಕ್ಕೆ ಮಾರು ಹೋಗುವ ಸಮಯದಲ್ಲಿ ನಮ್ಮ ಸಂಸ್ಕೃತಿಗೆ ದಕ್ಕೆಯಾಗಬಾರದು ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ಡಾ. ಕನರಾಡಿ ವಾದಿರಾಜ ಭಟ್ ಬಸ್ರೂರು ಮಾತನಾಡಿ ಶೇ.75 ರಷ್ಟು ಭೂಮಿ ಪಾಳು ಬಿದ್ದಿರುವುದನ್ನು ನೋಡುತ್ತಿದ್ದರೆ ಪರಿಸ್ಥಿತಿ ಯಾವ ರೀತಿಯಲ್ಲಿ ಮುಂದುವರಿಯಬಹುದೆಂಬುದನ್ನು ಗಮನಿಸಬೇಕು. ಬದುಕಿನಲ್ಲಿ ಕೃತಕತೆ ಹೆಚ್ಚಾಗಿ, ತಂತ್ರಜ್ಞಾನಗಳು ನಮ್ಮನ್ನು ಅತಂತ್ರಗೊಳಿಸುತ್ತಿದೆ ಎಂದು ಎಚ್ಚರಿಸಿದರು.ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಮುಂಬೈ ಉಪಸ್ಥಿತರಿದ್ದರು.
ರಾಜೇಶ್ವರಿ ಮತ್ತು ಬಳಗದವರಿಂದ ಪ್ರಾರ್ಥಿಸಿದರು. ಒಡಿಯೂರ್ದ ತುಳುಕೂಟದ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಸ್ವಾಗತಿಸಿದರು. ತುಳುನಾಡ್ದ ನಿಡಿ – ನಡಿಕೆ ಲೇಸ್ ಸಂಚಾಲಕ ಡಾ. ವಸಂತ ಕುಮಾರ್ ಪೆರ್ಲ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ಶೆಟ್ಟಿ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ಸಂಗ್ರಹ ವರದಿ : ಕಹಳೆ ನ್ಯೂಸ್

Leave a Response