Thursday, January 23, 2025
ಸುದ್ದಿ

ಎಕ್ಸಲೆಂಟ್‍ನಿಂದ ಮೂಡುಬಿದಿಯವರೆಗೆ: ಸ್ವಚ್ಛತಾ ಅಭಿಯಾನ – ಕಹಳೆ ನ್ಯೂಸ್

ಗಾಂಧೀಜಿಯವರ 150ನೇ ಜಯಂತಿಯ ಪ್ರಯುಕ್ತ ದೇಶದ ಪ್ರಧಾನ ಮಂತ್ರಿಗಳ ಆಶಯದಂತೆ ಸ್ವಚ್ಚಭಾರತದ ಅಂಗವಾಗಿ ಮೂಡುಬಿದಿರೆಯ ಆಸುಪಾಸಿನ ಪ್ರದೇಶಗಳಾದ ಕಲ್ಲಬೆಟ್ಟು, ಕಾಲೇಜಿನ ಆವರಣ, ವಸತಿನಿಲಯಗಳು ಮತ್ತು ಮೂಡುಬಿದಿರೆಯ ಪೇಟೆಯ ಸ್ವಚ್ಛತಾಕಾರ್ಯವನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ವತಿಯಿಂದ ನಡೆಸಲಾಯಿತು.

ಕಾರ್ಯಕ್ರಮವನ್ನು ಮೂಡಬಿದ್ರೆ ಜೈನ ಮಠದ ಪರಮ ಪೂಜ್ಯ ಸ್ವಸ್ತೀಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಪಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾದ್ಯಾಯರಾದ ಗುರುಪ್ರಸಾದ ಶೆಟ್ಟಿ, ರೋಟರಿ ಕ್ಲಬ್ ಮೂಡಬಿದಿರೆಯ ರಾಜೇಶ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿಯವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಯಿತು. ಪ್ರತಿಯೊಂದು ಹಳ್ಳಿಗಳೂ, ಗ್ರಾಮಗಳೂ ಸ್ವಚ್ಛಗೊಂಡರೆ ದೇಶವೇ ಶುಚಿಯಾಗುತ್ತದೆ ಎಂಬ ಆಶಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಥಮವಾಗಿ ಕಾಲೇಜಿನ ಪರಿಸರವನ್ನು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರು ಸ್ವಚ್ಛವಾಗಿಸುವ ಕಾರ್ಯ ನಡೆಸಿದರು. ಶಾಲಾ ಪರಿಸರ ಮತ್ತು ಕಾಲೇಜಿನ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಗಾಂಧೀಜಿಯವರ ಕನಸಿನಂತೆ ಸ್ವ-ಸ್ವಚ್ಛತೆಗೆ ಮತ್ತು ಬಾಹ್ಯ ಸ್ವಚ್ಛತೆಗೆ ಮುಖ್ಯ ಆದ್ಯತೆ ನೀಡುವ ಬಗ್ಗೆ ತಿಳುವಳಿಕೆ ನೀಡಲಾಯಿತು.

ನಂತರ ಎಕ್ಸಲೆಂಟ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಿಲಯಗಳ ಸ್ವಚ್ಛತಾಕಾರ್ಯ ನಡೆಯಿತು. ವಿದ್ಯಾರ್ಥಿ ನಿಲಯದ ಹತ್ತಿರದ ಪರಿಸರಕ್ಕೆ ಮಾರಕವಾದ ಅನಪೇಕ್ಷಿತ ವಸ್ತುಗಳನ್ನು ಹೆಕ್ಕಿ ವಸತಿ ನಿಲಯಗಳ ಸ್ವಚ್ಛತೆ ನಡೆಸಲಾಯಿತು ಮತ್ತು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಂತಹ ಕಸಗಳಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಸಲಾಯಿತು.

ಗಾಂಧೀಜಯಂತಿಯ ಪ್ರಯುಕ್ತ ಕಲ್ಲಬೆಟ್ಟು ಪರಿಸರವನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು ರಸ್ತೆಯ ಇಕ್ಕೆಲರಗಳಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕುವ ಮೂಲಕ ಸಾಮಾಜಿಕ ಬದ್ದತೆಯನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ವತಿಯಿಂದ ನಡೆಸಲಾಯಿತು ಮತ್ತು ವಿದ್ಯಾರ್ಥಿಗಳಿಗೆ ಸಾಮಾಜಿಕ ಕಾರ್ಯಗಳ ಮೂಲಕ ಜಾಗ್ರತಿ ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಮೂಡುಬಿದಿರೆ ಪೇಟೆಯ ಸ್ವಚ್ಛತಾ ಕಾರ್ಯವನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆಸಲಾಯಿತು ಮತ್ತು ಮೂಡುಬಿದಿರೆಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಜಾಗ್ರತಿಯನ್ನು ಉಂಟು ಮಾಡುವ ಉದ್ದೇಶದಿಂದ ಮದ್ಯಪಾನದ ದುಷ್ಪರಿಣಾಮದ ಕುರಿತು ಮದ್ಯಾಸುರವಧೆ ಎಂಬ ಬೀದಿನಾಟಕ ನಡೆಸಲಾಯಿತು. ಕುಡಿತದ ಕೆಡುಕು ಮತ್ತು ಕುಟುಂಬದವರಿಗಾಗುವ ಅನಾಹುತಗಳ ಬಗ್ಗೆ ಜಾಗ್ರತೆ ಮೂಡಿಸಲಾಯಿತು.

ಗಾಂಧೀಜಿಯವರ 150 ನೇ ವರ್ಷಾಚರಣೆಯ ಪ್ರಯುಕ್ತ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳು ಆಂತರಿಕ ಸ್ವಚ್ಛತೆಯೊಂದಿಗೆ ಸಾಮಾಜಿಕ ಜಾಗ್ರತೆಯನ್ನು ಮತ್ತು ಅದರ ಮಹತ್ವವನ್ನು ತಿಳಿಯಪಡುಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು, ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.