ಪುತ್ತೂರು: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಬಿಗ್ ಡಾಟಾ ಅನಲಿಟಿಕ್ಸ್ ವಿಭಾಗವು ಆಯೋಜಿಸಿದ ರಾಷ್ಟ್ರ ಮಟ್ಟದ ಐಟಿ ಫೆಸ್ಟ್‍ನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಬಿಸಿಎ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ತಂಡವು ಭಾಗವಹಿಸಿ, ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಆಶು ಭಾಷಣ ಸ್ಪರ್ಧೆಯಲ್ಲಿ ಶೋಭಿತ್ ದ್ವಿತೀಯ, ಪ್ರೊಎಡ್ವೆಂಟ್‍ನಲ್ಲಿ ಆಕಾಶ್ ಸಿ ಭಟ್, ವೈಷ್ಣವಿ, ಸೋನಿಯಾ ರವಿ ಮತ್ತು ಶರ್ಮಿಳಾ (ಪ್ರಥಮ), ಚರ್ಚಾ ಸ್ಪರ್ದೆಯಲ್ಲಿ ರಿಚ ಜೇನಿಯಲ್ ಡಿ’ಕೋಸ್ಟ ಮತ್ತು ಎಮ್ ಅಭಯ್ ಕುಲಕರ್ಣಿ (ಪ್ರಥಮ), ಐಟಿ ಮ್ಯಾನೇಜರ್ ಸ್ಪರ್ಧೆಯಲ್ಲಿ ಚಂದ್ರಾಕ್ಷ (ಪ್ರಥಮ), ಚೈತನ್ಯ ಮತ್ತು ಚೇತನ್ ಕೊಲಾಜ್ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಗೀತಾ ಪೂರ್ಣಿಮಾ ಕೆ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ಸಹಕರಿಸಿರುತ್ತಾರೆ ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.