Thursday, January 23, 2025
ಸುದ್ದಿ

ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ‘ಗಾಂಧಿ ಸ್ಮೃತಿ’ ಕಾರ್ಯಕ್ರಮ –ಕಹಳೆ ನ್ಯೂಸ್

ಪುತ್ತೂರು: ಬದಲಾವಣೆಯ ಹರಿಕಾರರು ನಾವಾಗಬೇಕು. ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಬೇಕಾದರೆ ಮೊದಲು ನಮ್ಮ ಮನಸ್ಸು ಸ್ವಚ್ಛವಾಗಬೇಕು. ಅದರ ಜೊತೆಗೆ ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಹಾಗೂ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಬಿ. ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ನಡೆದ ‘ಗಾಂಧಿ ಸ್ಮøತಿ’ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬುಧವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬದಲಾವಣೆಯನ್ನು ಸತ್ಯದ ಮೂಲಕ ಮಾಡಬೇಕು. ಈ ರೀತಿಯಾದ ಬದಲಾವಣೆಯು ಮೊದಲು ನಮ್ಮಿಂದ ಆಗಬೇಕು ಎಂಬ ದೃಢ ನಿರ್ಧಾರ ಕೈಗೊಳ್ಳಬೇಕು. ಅಂತೆಯೇ ಗಾಂಧೀಜಿಯವರು ಸಮಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಹಾಗೆಯೇ ನಾವೆಲ್ಲರೂ ಸಮಯವನ್ನು ಪಾಲಿಸಬೇಕು. ಗಾಂಧಿಯ ಪಂಚಶೀಲ ತತ್ವಗಳಾದ ಸಹನೆ, ತಾಳ್ಮೆ, ಅಹಿಂಸೆ, ದೇಶಭಕ್ತಿ, ತ್ಯಾಗ ಇವುಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತ್ಯಾಗ ಮತ್ತು ಸ್ವಾತಂತ್ರ್ಯದ ಬದುಕು ನಮ್ಮದಾಗಬೇಕು. ಗಾಂಧೀಜಿಯ ಬದುಕಿನ ಸರಳತೆಯನ್ನು, ಜೀವನ ಮೌಲ್ಯವನ್ನು ಭಾರತೀಯರಾದ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರೀತಿಯ ಬಲದಿಂದ ಎಲ್ಲರ ಮನಸ್ಸನ್ನು ಗೆಲ್ಲುವವರಂತಾಗಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಲಕ್ಷ್ಮಿ ಭಟ್, ಅನನ್ಯ ವಿ. ಉಪಸ್ಥಿತರಿದ್ದರು. ಉಪನ್ಯಾಸಕ ವರ್ಷಿತ್ ಸ್ವಾಗತಿಸಿದರು. ಉಪನ್ಯಾಸಕ ರಾಘವೇಂದ್ರ ವಂದಿಸಿದರು. ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.